ADVERTISEMENT

ಬೆಳಗಾವಿ | ಮಕ್ಕಳ ಕಳ್ಳರೆಂಬ ಸಂಶಯ: ಮೂವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 16:54 IST
Last Updated 10 ಸೆಪ್ಟೆಂಬರ್ 2022, 16:54 IST
ಆರೋಪಿಗಳನ್ನು ಠಾಣೆಗೆ ಕರೆದೊಯ್ಯುತ್ತಿರುವುದು
ಆರೋಪಿಗಳನ್ನು ಠಾಣೆಗೆ ಕರೆದೊಯ್ಯುತ್ತಿರುವುದು    

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮರಿಗೇರಿ- ಇಟಗಾ ಗ್ರಾಮದಲ್ಲಿ ಶನಿವಾರ ಮಕ್ಕಳ ಕಳ್ಳತನ ಮಾಡಲು ಯತ್ನಿಸಿದರು ಎಂಬ ಸಂಶಯದಿಂದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗೆ ಇದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ.

ರಗ್ಗು, ಬೆಡ್ ಸೀಟ್, ಪ್ಲಾಸ್ಟಿಕ್ ಬುಟ್ಟಿಗಳನ್ನು ಮಾರಲು ಆರು ಜನ ವಾಹನದಲ್ಲಿ ಬಂದಿದ್ದರು. ರಸ್ತೆ ಬದಿ ಸೈಕಲ್ ಓಡಿಸುತ್ತಿದ್ದ ಬಾಲಕನನ್ನು ವಾಹನದಲ್ಲಿ ಹತ್ತಿಸಿಕೊಳ್ಳಲು ಯತ್ನಿಸಿದರು. ಇದರಿಂದ ಕಿರುಚಿದ 12 ವರ್ಷದ ಬಾಲಕ ಮನೆಗೆ ಓಡಿದ. ಇದನ್ನು ಕಂಡು ಊರಿನ ಜನ ಗುಂಪಾಗಿ ಸೇರಿದರು. ಜನಸಂದಣಿ ಕಂಡು ಮೂವರು ಪರಾರಿಯಾದರು. ಕೈಗೆ ಸಿಕ್ಕ ಮೂವರನ್ನು ಜನ ಪೊಲೀಸರಿಗೆ ಒಪ್ಪಿಸಿದರು.

ಆದರೆ, ತಾವು ಉತ್ತರ ಪ್ರದೇಶದಿಂದ ವ್ಯಾಪಾರ ಮಾಡುತ್ತ ಊರೂರು ಅಲೆಯುವುದಾಗಿ ಆರೋಪಿಗಳು ಹೇಳಿದ್ದಾರೆ. ತನ್ನನ್ನು ಎಳೆದುಕೊಂಡು ಹೋಗಲು ಯತ್ನಿಸಿದರು ಎಂದು ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ರಾತ್ರಿಯವರೆಗೂ ಈ ಬಗ್ಗೆ ಪ್ರಕರಣ ದಾಖಲಿಸಿರಲಿಲ್ಲ.

ADVERTISEMENT

ಈ ಘಟನಾವಳಿಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.