ADVERTISEMENT

ಟಿಪ್ಪರ ಡಿಕ್ಕಿ: ಗಂಭೀರವಾಗಿ ಗಾಯಗೊಂಡ ಪಾದಚಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 3:13 IST
Last Updated 13 ಫೆಬ್ರುವರಿ 2026, 3:13 IST
   

ಗೋಕಾಕ: ಪಾದಚಾರಿ ಮಹಿಳೆಗೆ ಹಿಂದಿನ ಬಂದ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಆಕೆಯ ತಲೆ, ಕಾಲು ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಮಂಗಳವಾರ ಮಧ್ಯಾಹ್ನ ತಾಲ್ಲೂಕಿನ ಬೆಣಚಿನಮರಡಿ (ಉ) - ಕುಂದರಗಿ ರಸ್ತೆಯಲ್ಲಿ ಸಂಭವಿಸಿದೆ.

ಗಾಯಾಳನ್ನು ತಾಲ್ಲೂಕಿನ ಉರುಬಿನಹಟ್ಟಿ ಗ್ರಾಮದ ಮಲ್ಲವ್ವ ನಿಂಗಪ್ಪ ಪಾಟೀಲ (58) ಎಂದು ಗುರುತಿಸಲಾಗಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಗಾಯಾಳುವಿನ ಮಗ ಉರುಬಿನಹಟ್ಟಿಯ ರಾಜಶೇಖರ ನಿಂಗಪ್ಪ ಪಾಟೀಲ ಎಂಬುವವರು ಟಿಪ್ಪರ್‌ ಚಾಲಕ ಬೆಳಗಾವಿಯ ಅನಿಗೋಳದ ರಮೇಶ ಸತ್ತೆಪ್ಪ ಅಡಕಾಯಿ ಎಂಬಾತನ ವಿರುದ್ಧ ನೀಡಿದ ದೂರಿನನ್ವಯ ಅಂಕಲಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.