ADVERTISEMENT

‘ಕೂಲಿಕಾರರಿಗೆ ಸಾಕ್ಷರತಾ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:03 IST
Last Updated 19 ಜನವರಿ 2022, 15:03 IST
ನೇಸರಗಿ ಸಮೀಪದ ವಣ್ಣೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಬುಧವಾರ ಬೋಧಕರ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ಶಿಕ್ಷಕ ಎಸ್.ಎಂ. ಶಾಪೂರಮಠ ಉದ್ಘಾಟಿಸಿದರು
ನೇಸರಗಿ ಸಮೀಪದ ವಣ್ಣೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಬುಧವಾರ ಬೋಧಕರ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ಶಿಕ್ಷಕ ಎಸ್.ಎಂ. ಶಾಪೂರಮಠ ಉದ್ಘಾಟಿಸಿದರು   

ನೇಸರಗಿ: ‘ಅನಕ್ಷರಸ್ಥ ನರೇಗಾ ಕೂಲಿಕಾರರು ಮತ್ತು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಕಾರ್ಯಕರ್ತರನ್ನು ಗುರುತಿಸಿ ಅಕ್ಷರ ಕಲಿಸುವ ಕಾರ್ಯ ಮಾಡಲಾಗುತ್ತದೆ’ ಎಂದು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ಎಸ್.ಬಿ. ಸಂಗನಗೌಡರ ಹೇಳಿದರು.

ಸಮೀಪದ ವಣ್ಣೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೋಧಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಕ್ಷರಸ್ಥರನ್ನು ಗುರುತಿಸಿ ಪಾಠ ಹೇಳುವ ಕಾರ್ಯಕ್ಕಾಗಿ ಸಾಕ್ಷರ ಬೋಧಕರನ್ನು ನೇಮಿಸಿ ಕಾರ್ಯಗತಗೊಳಿಸಲಾಗುತ್ತದೆ. ಪುಸ್ತಕಗಳ ಮೂಲಕ ಬೋಧನೆ ಮಾಡಿ ಕನ್ನಡ, ಗಣಿತ, ಪರಿಸರ ವಿಜ್ಞಾನ ವಿಷಯಗಳ ಬಗ್ಗೆ ಕಲಿಸಲಾಗುತ್ತದೆ’ ಎಂದರು.

ADVERTISEMENT

ವಣ್ಣೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ.ಎಸ್. ವಾರದ, ‘ಮನೆಯ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಕಲಿಸುವ ಉದ್ದೇಶದಿಂದ ಸಾಕ್ಷರತಾ ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರದ ಯೋಜನೆಗಳನ್ನು ತಿಳಿಯಲು, ಸಮಾಜದ ರೀತಿ–ನೀತಿಗಳ ಬಗ್ಗೆ ತಿಳಿಸುವುದು ಉದ್ದೇಶವಾಗಿದೆ’ ಎಂದು ಹೇಳಿದರು.

ಸಂಪನ್ಮೂಲ ಶಿಕ್ಷಕ ಎಸ್.ಎಂ. ಶಾಪೂರಮಠ ಮಾತನಾಡಿದರು.

ಬೋಧಕರಿಗೆ ಪುಸ್ತಕ ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ವಿ.ಬಿ. ದೇಸಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿ.ಐ. ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಐ. ಮಿರ್ಜನ್ನವರ, ಎಸ್.ಪಿ. ಹುದ್ದಾರ, ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.