ADVERTISEMENT

UPSC ಫಲಿತಾಂಶ: ಕುಡಚಿಯ ಗಜಾನನ ಬಾಲೆಗೆ 319ನೇ ರ್‍ಯಾಂಕ್

​ಪ್ರಜಾವಾಣಿ ವಾರ್ತೆ
Published 30 ಮೇ 2022, 10:39 IST
Last Updated 30 ಮೇ 2022, 10:39 IST
   

ಬೆಳಗಾವಿ: ಜಿಲ್ಲೆಯ ‌ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಬಾಲೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 319ನೇ ರ್‍ಯಾಂಕ್ ಗಳಿಸಿದ್ದಾರೆ.

2019ನೇ ಸಾಲಿನ ಪರೀಕ್ಷೆಯಲ್ಲಿ ಅವರು 663ನೇ ರ್‍ಯಾಂಕ್ ಗಳಿಸಿದ್ದರು. ಭಾರತೀಯ ಅಂಚೆ ಸೇವಾ ಇಲಾಖೆಯಲ್ಲಿ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆಯೂ ಪ್ರಯತ್ನ ಮುಂದುವರಿಸಿ ಫಲಿತಾಂಶ ಸುಧಾರಿಸಿಕೊಂಡಿದ್ದಾರೆ. ಹೋದ ಬಾರಿ ಐದನೇ ಸಲ ಪರೀಕ್ಷೆ ಬರೆದಿದ್ದರು. 6ನೇ ಬಾರಿಗೆ ಹೆಚ್ಚಿನ ಸಾಧನೆ ತೋರಿದ್ದಾರೆ. ಐಎಎಸ್ ಅಥವಾ ಐಪಿಎಸ್ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿ 663ನೇ ರ್‍ಯಾಂಕ್ ಗಳಿಸಿದ್ದಾಗ ಪ್ರತಿಕ್ರಿಯಿಸಿದ್ದ ಅವರು, ಪರೀಕ್ಷೆಗೆ ‘ಪ್ರಜಾವಾಣಿ’ ಓದು ಸಹ ನೆರವಾಗಿದೆ ಎಂದಿದ್ದರು.

‘ನಿತ್ಯ 8 ತಾಸು ಓದುತ್ತಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ದಿನಪತ್ರಿಕೆಗಳನ್ನು ಓದುತ್ತಿದ್ದೆ. ಇಂಗ್ಲಿಷ್ ಪತ್ರಿಕೆಯೊಂದಿಗೆ ‘ಪ್ರಜಾವಾಣಿ’ಯನ್ನು ನಿಯಮಿತವಾಗಿ ಓದುತ್ತಿದ್ದೆ. ಇದರಿಂದ ಪರೀಕ್ಷೆಯಲ್ಲಿ ಬಹಳ ಸಹಾಯವಾಯಿತು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.