ADVERTISEMENT

‘ಜನರ ಆಶೋತ್ತರಗಳಿಗೆ ತಕ್ಕಂತೆ ಅನುದಾನ ಬಳಕೆ’: ಈರಣ್ಣ ಕಡಾಡಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:07 IST
Last Updated 20 ಜುಲೈ 2025, 3:07 IST
ಮೂಡಲಗಿ ಸಮೀಪದ ಭೀರನಗಡ್ಡಿ ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸುತ್ತಿರುವ ಬಸ್‌ ತಂಗುದಾಣ ನಿರ್ಮಾಣ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು 
ಮೂಡಲಗಿ ಸಮೀಪದ ಭೀರನಗಡ್ಡಿ ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸುತ್ತಿರುವ ಬಸ್‌ ತಂಗುದಾಣ ನಿರ್ಮಾಣ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು    

ಮೂಡಲಗಿ: ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ಬಸ್‌ ಪ್ರಯಾಣಿಕರ ತಂಗುದಾಣ ಮತ್ತು ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ  ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

‘ಮೂಡಲಗಿ ತಾಲ್ಲೂಕಿನ ಬಹಳಷ್ಟು ಗ್ರಾಮಗಳ ಜನರ ಆಶೋತ್ತರಳಿಗೆ ಸ್ಪಂದಿಸಿದ್ದೇನೆ. ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ಇದೆ’ ಎಂದು ಈರಣ್ಣ ಕಡಾಡಿ ಹೇಳಿದರು.

ಕೆಲವು ಕಡೆ ಸಂಸದರ ಅನುದಾನ ಬಳಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಸ್ಪರ್ಧೆ ಮಾಡಬೇಕು ವಿನ: ಅಡೆತಡೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಮೂಡಲಗಿ ಪಟ್ಟಣದಲ್ಲಿ ರಾಜ್ಯಸಭಾ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಓಪನ್‌ ಜಿಮ್ ಮತ್ತು ಪ್ರಯಾಣಿಕರ ತಂಗುದಾಣಗಳ ನಿರ್ಮಾಣಕ್ಕೆ ಪುರಸಭೆಯವರು ಅನುಮತಿ ನಿರಾಕರಿಸಿ ಪತ್ರ ನೀಡಿದ್ದಾರೆ. ಇದು ವಿಪರ್ಯಾಸ ಸಂಗತಿಯಾಗಿದೆ’ ಎಂದು ಅವರು ಕಿಡಿಕಾರಿದರು.

ಸಿದ್ರಾಮ ಕುಳ್ಳೂರ, ಸುನೀಲ ಈರೇಶನವರ, ಕಲ್ಲಪ್ಪ ಪಾಗಾದ, ವಿಠ್ಠಲ ಸುಣಧೋಳಿ, ಬಸವಣ್ಣಿ ತೆಳಗಡೆ, ದಶರಥ ಪಾಟೀಲ, ಬಸಪ್ಪ ಪಾಗಾದ, ಅಡಿವೆಪ್ಪ ಬಿಲಕುಂದಿ, ಅಲ್ಲಯ್ಯ ಪೂಜೇರಿ, ಸದಾ ಗುದಗಗೋಳ, ಲಗಮಣ್ಣ ಕುಳ್ಳೂರ, ಬಸವರಾಜ ಕೊಟಗಿ, ಮಾರುತಿ ಮೆಳವಂಕಿ, ಸತ್ತೆಪ್ಪ ಕಳಜಕನ್ನವರ, ಪ್ರಕಾಶ ಜಾಗನೂರ, ಲಗಮಣ್ಣ ಕಳಸಣ್ಣವರ, ಶಂಕರ ಮುದೆಪ್ಪಗೋಳ, ಗುರಸಿದ್ಧ ಪೊಟಿ, ಮುದಕಪ್ಪ ಈರೇಶನವರ, ಪ್ರಕಾಶ ಕರೆಪ್ಪಗೋಳ, ಮುದಕಪ್ಪ ಬೆಳವಿ, ಭೀಮಪ್ಪ ಕೌಜಲಗಿ, ಭೀಮಶೆಪ್ಪಾ ಕರೆಪ್ಪಗೋಳ, ಬಸವರಾಜ ಬೆಳವಿ, ಭೀಮಶೆಪ್ಪಾ ಚೆನ್ನಬಸಪ್ಪಗೋಳ, ದೇವಪ್ಪ ಕರಿಗಾರ, ಬಸವಣ್ಣಿ ಸಂಪಗಾಂವ, ಸಂಜೀವ ತಿಪ್ಪವ್ವಗೋಳ, ಬಸಲಿಂಗ ತೆಳಗಡೆ, ರಾಮಪ್ಪ ಬೆನವಾಡ, ಬಸಪ್ಪ ಮಾನಗಾಂವಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.