ADVERTISEMENT

ಬೆಳಗಾವಿ: ಕೊರೊನಾ ವೈರಸ್‌ ನಾಶಪಡಿಸಬಲ್ಲ ಯುವಿ–ಲೈಟ್‌ ಬಾಕ್ಸ್‌ !

ಅತಿನೆರಳೆ ಕಿರಣಗಳ (ಅಲ್ಟ್ರಾ ವಯೊಲೆಟ್‌) ಸ್ಯಾನಿಟೈಸರ್‌ ಬಾಕ್ಸ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:28 IST
Last Updated 15 ಜುಲೈ 2020, 15:28 IST
ಅತಿನೆರಳೆ ಕಿರಣಗಳನ್ನು ಹೊರಸೂಸುವ ಟ್ಯೂಬ್‌ಲೈಟ್‌ ಇರುವ ಬಾಕ್ಸ್‌
ಅತಿನೆರಳೆ ಕಿರಣಗಳನ್ನು ಹೊರಸೂಸುವ ಟ್ಯೂಬ್‌ಲೈಟ್‌ ಇರುವ ಬಾಕ್ಸ್‌   

ಬೆಳಗಾವಿ: ಕೊರೊನಾ ಸೇರಿದಂತೆ ಹಲವು ವೈರಸ್‌ಗಳನ್ನು ನಾಶಪಡಿಸಬಲ್ಲ ಅತಿನೆರಳೆ ಕಿರಣಗಳ (ಅಲ್ಟ್ರಾ ವಯೊಲೆಟ್‌) ಸ್ಯಾನಿಟೈಸರ್‌ ಬಾಕ್ಸ್‌ ಅನ್ನು ಇಲ್ಲಿನ ಎಟಿಟಿಐಎಸ್ ಸಿಸ್ಟಂ ಕಂಪನಿಯುಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಅತಿನೆರಳೆ ಕಿರಣಗಳನ್ನು ಹೊರಸೂಸುವ ಟ್ಯೂಬ್‌ಲೈಟ್‌ ಅನ್ನು ಈ ಬಾಕ್ಸ್‌ನಲ್ಲಿ ಅಳವಡಿಸಲಾಗಿದೆ. ಸ್ಯಾನಿಟೈಸ್‌ ಮಾಡಬೇಕಾದ ವಸ್ತುಗಳನ್ನು ಬಾಕ್ಸ್‌ನಲ್ಲಿ ಇಟ್ಟು, ಮುಚ್ಚಳ ಹಾಕಬೇಕು. ಟ್ಯೂಬ್‌ಲೈಟ್‌ನಿಂದ ಹೊರಹೊಮ್ಮುವ ಅತಿನೆರಳೆ ಕಿರಣಗಳು ಕೆಲವೇ ನಿಮಿಷಗಳಲ್ಲಿ ವೈರಸ್‌ಗಳನ್ನು ನಾಶಪಡಿಸುತ್ತದೆ. ನೀರು, ತರಕಾರಿ, ಬಟ್ಟೆ, ನೋಟುಗಳು, ಹೆಲ್ಮೆಟ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಾಕ್ಸ್‌ನಲ್ಲಿಟ್ಟು, ಸ್ಯಾನಿಟೈಸ್‌ ಮಾಡಬಹುದಾಗಿದೆ.

‘ಈ ತಂತ್ರಜ್ಞಾನವನ್ನು ವಿಶ್ವ ಆರೋಗ್ಯ ಸಂಸ್ಥೆ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳು ಒಪ್ಪಿಕೊಂಡಿವೆ. ಈಗಾಗಲೇ ವಿದೇಶಗಳಲ್ಲಿ ಯುವಿ–ಲೈಟ್‌ ತಂತ್ರಜ್ಞಾನ ಬಳಸಿ, ಕಾರ್ಖಾನೆಗಳನ್ನು, ಆಸ್ಪತ್ರೆಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ’ ಎಂದು ಎಟಿಟಿಐಎಸ್‌ ಸಿಸ್ಟಂ ಕಂಪನಿಯ ಪ್ರತಿನಿಧಿ ಭರತ ಕುಡಚಿ ತಿಳಿಸಿದರು.

ADVERTISEMENT

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಅನಿಲ ಶಿರಹಟ್ಟಿ, ಅಮಿತ್ ಲೋಬೊ ಅವರ ಸಹಕಾರ ಇದಕ್ಕಿದೆ. ಈ ಬಾಕ್ಸ್‌ ಮಾರಾಟಕ್ಕೆ ಲಭ್ಯವಿದ್ದು, ನಗರದ ಕಾಂಗ್ರೆಸ್‌ ರೋಡ್‌ನಲ್ಲಿರುವ ಕಂಪನಿಯ ಮಳಿಗೆಯಲ್ಲಿ ಇದರ ದರ ₹ 2,360 ಇದೆ. ಹೆಚ್ಚಿನ ಮಾಹಿತಿಗಾಗಿ 9004994981 ಸಂಪರ್ಕಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.