ADVERTISEMENT

‘ಕೋವಿಶೀಲ್ಡ್ 2ನೇ ಡೋಸ್ ಮಾತ್ರ’

​ಪ್ರಜಾವಾಣಿ ವಾರ್ತೆ
Published 17 ಮೇ 2021, 13:11 IST
Last Updated 17 ಮೇ 2021, 13:11 IST

ಬೆಳಗಾವಿ: ‘ಸರ್ಕಾರದ ಸದ್ಯದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕೋವಿಶೀಲ್ಡ್‌ 2ನೇ ಡೋಸ್ ಮಾತ್ರ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಪೂರೈಕೆ ಆಗುವ ಕೋವಿಡ್ ಲಸಿಕೆಯನ್ನು ಲಭ್ಯತೆಗಳಿಗೆ ಅನುಗುಣವಾಗಿ ಎಲ್ಲ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ತಜ್ಞರ ವರದಿಯಂತೆ ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದ ಕನಿಷ್ಠ ಪಕ್ಷ 12 ವಾರ ಅಂದರೆ 84 ದಿನಗಳು ಮುಗಿದವರು ಮಾತ್ರ 2ನೇ ಡೋಸ್‌ ಪಡೆಯಲು ಅರ್ಹರಿರುತ್ತಾರೆ’ ಎಂದು ಹೇಳಿದ್ದಾರೆ.

‘ಕೋವಿಶೀಲ್ಡ್‌ ಲಸಿಕೆಗೆ 12 ವಾರದಿಂದ 16 ವಾರದೊಳಗಿನ 2ನೇ ಡೋಸ್ ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ (ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲಿನವರು) ಮುಂದಿನ ಎರಡು ದಿನಗಳಲ್ಲಿ ಹತ್ತಿರದ ಲಸಿಕಾ ಕೇಂದ್ರಗಳಿಗೆ (ಸಿ.ವಿ.ಸಿ) ಭೇಟಿ ನೀಡಿ 2ನೇ ಡೋಸ್ ಪಡೆದುಕೊಳ್ಳಬೇಕು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.