ADVERTISEMENT

ವಚನಾಮೃತ | ಭವಸಾಗರದ ಬಲೆಯಲ್ಲಿ ನರಳಬೇಡಿ: ಡಾ.ಅಲ್ಲಮಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 19:30 IST
Last Updated 26 ಜನವರಿ 2022, 19:30 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಅಕಟಕಟಾ, ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ!

ಅಕಟಕಟಾ, ಶಿವ ನಿನಗಿನಿತು ಕೃಪೆಯಿಲ್ಲ!

ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?

ADVERTISEMENT

ಏಕೆ ಹುಟ್ಟಿಸಿದೆ ಪರಲೋಕದೂರನ?

ಏಕೆ ಹುಟ್ಟಿಸಿದೆ, ಕೂಡಲಸಂಗಮದೇವ ಕೇಳಯ್ಯಾ

ಎನಗಾಗಿ ಮತ್ತೊಂದು ತರುಮರನಿಲ್ಲವೆ?

ಭಗವಂತನು ಸೃಷ್ಟಿಸಿರುವ ಈ ಪ್ರಪಂಚದಲ್ಲಿ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ ಪ್ರಾಣಿಯೊಂದೆ. ಸಕಲವನ್ನು, ಸರ್ವಸ್ವವನ್ನೂ ಅರಿಯುವ ವಿಶಿಷ್ಟ ವಿವೇಚನಾ ಶಕ್ತಿಯನ್ನು ಆತ ಪಡೆದಿದ್ದಾನೆ. ಅಂತಹ ಬುದ್ಧಿವಂತನಾದ ಮಾನವನು ಸುಖ-ದುಃಖಗಳನ್ನು ಅನುಭವಿಸುತ್ತಾನೆ. ಕಷ್ಟ-ನಷ್ಟಗಳನ್ನು ಕಾಣುತ್ತಾನೆ. ಅನುಭವಿಸುತ್ತಾನೆ. ನೋವು-ನಲಿವುಗಳನ್ನು ಅನುಭವಿಸುತ್ತಾನೆ. ಭಗವಂತನ ಅನುಗ್ರಹವನ್ನು ಪಡೆಯುವ ಶಕ್ತಿ ಮಾನವನಿಗೆ ಮಾತ್ರ ಇದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಆತ ನಡೆದುಕೊಳ್ಳುವುದರಿಂದ ಭವಸಾಗರದ ಬಲೆಯಲ್ಲಿ ಬಿದ್ದು ನರಳಾಡುತ್ತಾನೆ. ಈ ಲೋಕದಲ್ಲಿ ದುಃಖಿಯನ್ನಾಗಿ ಹುಟ್ಟಿಸುವ ಬದಲು ಗಿಡಮರಾದಿ (ತರುಮರಾದಿ)ಗಳನ್ನಾಗಿ ಹುಟ್ಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಸವಣ್ಣನವರು ಈ ವಚನದ ಮೂಲಕ ಭಗವಂತನಲ್ಲಿ ಮೊರೆ ಇಟ್ಟಿದ್ದಾರೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.