ADVERTISEMENT

ವಚನಾಮೃತ | ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 6:48 IST
Last Updated 24 ಜೂನ್ 2020, 6:48 IST
ಪಂಚಾಕ್ಷರಿ ಸ್ವಾಮೀಜಿ
ಪಂಚಾಕ್ಷರಿ ಸ್ವಾಮೀಜಿ   

ಪೃಥ್ವಿಯೊಳಗೆ ನವಖಂಡಗಳು, ನವಸಕೀಲಗಳು, ನವಗ್ರಹಗಳು ಮತ್ತು ನವರತ್ನಗಳು ಇರುವ ಹಾಗೆ ಮನುಷ್ಯನಿಗೆ ಒಂಬತ್ತು ದ್ವಾರಗಳಿವೆ. ಮನೆಯಲ್ಲಿ ಗಿಳಿ ಸಾಕಬೇಕಾದರೆ ಅದು ಹಾರಿ ಹೋಗಬಾರದೆಂದು ಪಂಜರನ್ನು ತಯಾರಿಸಿ ಅದರಲ್ಲಿ ಇರಿಸುತ್ತೇವೆ. ಶರೀರಕ್ಕೆ ಒಂಬತ್ತು ಬಾಗಿಲಗಳಿದ್ದರೂ, ಅವು ಸದಾ ತೆರೆದೇ ಇದ್ದರೂ ಜೀವವೆಂಬ ಗಿಳಿ ಹಾರಿ ಹೋಗಿಲ್ಲ. ಅದು ಹಾರಿ ಹೋಗುವಾಗ ತಡೆದು ನಿಲ್ಲಿಸುವವರು ಇನ್ನೂ ಹುಟ್ಟಿಲ್ಲ.

ಜೀವಿತ ಕಾಲದಲ್ಲಿ ಜೀವನದ ಬೆಲೆ ಬಲ್ಲವರು ಬಹಳಿಲ್ಲ. ಹೋದ ಮೇಲೆ ಹುಡುಕಲು ಕಳಕೊಂಡವರೇ ಉಳಿದಿರುವುದಿಲ್ಲ. ಜೀವನ ಬಹಳ ಅಮೂಲ್ಯವಾದದ್ದು. ಕೊರೊನಾದಂಥ ಮಾರಕ ಸೋಂಕಿನ ವಿರುದ್ಧ ಹೋರಾಡಿ ಜೀವನವನ್ನು ಇಂದಿನ ಸಂದರ್ಭದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ಗಂಟೆ ಒಂಬತ್ತು ನಿಮಿಷಕ್ಕೆ ಒಂದು ದೀಪ ಹಚ್ಚಿರಿ ಎಂದು ಸಂದೇಶ ಸಾರಿದರು.

ಬಂಗಾಲಿ ಸಂತಿ ಬಹು ಗಡಿಬಿಡಿ
ಸುಳ್ಳೇ ಭ್ರಾಂತಿಗೆಟ್ಟು ತಿರುಗಬ್ಯಾಡೆಲೆ ಖೋಡಿ
ಒಂಬತ್ತು ಅಗಸಿ-ಪ್ಯಾಟಿ ಬಾಜಾರ
ಅಲ್ಲಿ ಇರುವವರು ಆರು ಮಂದಿ ದಲಾಲರು
ಪಟ್ಟಣಶೆಟ್ಟಿ ಎಂಬ ಸಾಹುಕಾರ
ಅವನ ಹತ್ತಿರ ಮಾಡಿಕೊ ವ್ಯಾಪಾರ...

ADVERTISEMENT

ಎಂದು ಶಿಶುನಾಳ ಶರೀಫ ಶಿವಯೋಗಿಗಳು ಹಾಡಿದ್ದಾರೆ. ನಾವೆಲ್ಲರೂ ಜೀವವೆಂಬ ಅನರ್ಘ್ಯ ರತ್ನವನ್ನು ಉಳಿಸಿಕೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡಬೇಕಿದೆ.

-ಪಂಚಾಕ್ಷರಿ ಸ್ವಾಮೀಜಿ, ಶ್ರೀಗುರು ಮಡಿವಾಳೇಶ್ವರಮಠ, ನಿಚ್ಚಣಕಿ, ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.