ಅಥಣಿ: ‘ಯುವ ಜನತೆಯ ಆಶಾಕಿರಣ, ಸ್ಫೂರ್ತಿಯ ಚಿಲುಮೆಯಾಗಿದ್ದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯವಾಗಿವೆ’ ಎಂದು ನಿಲಯಪಾಲಕಿ ಪಾರ್ವತಿ ಮಲಗೌಡರ ಹೇಳಿದರು.
ಇಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ಶ್ರಮದಾನ ಹಾಗೂ ರಾಷ್ಟ್ರೀಯ ಭಾವೈಕ್ಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಯುವಜನತೆ ಅಂತರ್ಜಾಲದ ಮೋಹದಿಂದಾಗಿ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುವ ಜೊತೆಗೆ ಗುರಿ ಸಾಧಿಸುವ ನಿಟ್ಟಿನಲ್ಲಿ ವಿಫಲರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಗುರಿ ಹಾಗೂ ಗುರುವಿನ ಅಗತ್ಯವಿದೆ’ ಎಂದರು.
ವಿದ್ಯಾರ್ಥಿನಿಯರಾದ ಪೂಜಾ ಚಾಬರೆ, ಲಕ್ಷ್ಮಿ ಶಿಂಧೆ ಮಾತನಾಡಿದರು. ಎ. ಗುಮಟೆ, ಶ್ವೇತಾ ಬಾನಿ, ಕಾವೇರಿ ಬನ್ನೂರ, ಲಕ್ಷ್ಮಿ ಕುಲಗೊಡ, ಸಾವಿತ್ರಿ ನಾಯ್ಕರ, ಸವಿತಾ ಶಿಂಧೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.