ADVERTISEMENT

ಮತ ಚಲಾಯಿಸಿದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:00 IST
Last Updated 22 ಏಪ್ರಿಲ್ 2019, 14:00 IST

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಇಲ್ಲಿನ ಎರಡು ಆಸ್ಪತ್ರೆಗಳು ತಿಳಿಸಿವೆ.

3ನೇ ರೈಲು ಗೇಟ್‌ ಬಳಿಯ ವೇಣುಗ್ರಾಮ ಆಸ್ಪತ್ರೆಯವರು, ಮೇ ಅಂತ್ಯದವರೆಗೆ ಡಯೋಗ್ನಾಸ್ಟಿಕ್ ಹಾಗೂ ಮಾಸ್ಟರ್ ಹೆಲ್ತ್‌ಚೆಕ್‌ ಮೇಲೆ ಶೇ 10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕುಲಕರ್ಣಿ ಗಲ್ಲಿಯ ಖೇಮಲಾಪುರೆ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ಮತ್ತು ಹಲ್ಲುಗಳ ಉಚಿತ ತಪಾಸಣೆ ಮಾಡಲಾಗುವುದು. ಶೇ 15ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ:9902001438 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.