ADVERTISEMENT

ನಿಪ್ಪಾಣಿ: ವಿದ್ಯಾ ಸಂವರ್ಧಕ ಮಂಡಳಿಯಿಂದ 6,000 ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 1:57 IST
Last Updated 14 ಜನವರಿ 2026, 1:57 IST
<div class="paragraphs"><p>ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳದ 67ನೇಯ ಸಂಸ್ಥಾಪನಾ ದಿನದ ಅಂಗವಾಗಿ ಸಂಸ್ಥಾಪಕರ ಭಾವಚಿತ್ರಗಳಿಗೆ ಹಾಲಿ ಪದಾಧಿಕಾರಿಗಳು ಪೂಜೆ ಸಲ್ಲಿಸಿದರು.</p></div>

ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳದ 67ನೇಯ ಸಂಸ್ಥಾಪನಾ ದಿನದ ಅಂಗವಾಗಿ ಸಂಸ್ಥಾಪಕರ ಭಾವಚಿತ್ರಗಳಿಗೆ ಹಾಲಿ ಪದಾಧಿಕಾರಿಗಳು ಪೂಜೆ ಸಲ್ಲಿಸಿದರು.

   

ನಿಪ್ಪಾಣಿ: ‘ಆರು ದಶಕಗಳ ಹಿಂದೆ ಹಿರಿಯರು ನೆಟ್ಟ ‘ವಿದ್ಯಾ ಸಂವರ್ಧಕ ಮಂಡಳ (ವಿಎಸ್‌ಎಂ)’ ಎಂಬ ಸಸಿ ಇಂದು ವಿಶಾಲವಾಗಿ ಬೆಳೆದು, ಪ್ರತಿವರ್ಷ ಸುಮಾರು 6,000 ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡುತ್ತಿದೆ. ಇದರ ಸಂಸ್ಥಾಪಕರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಮಂಡಳದ 67ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಎಸ್‌ಎಂ ಫೌಂಡೇಶನವು ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

‘ಮಂಡಳ ಹುಟ್ಟುಹಾಕುವುದಲ್ಲದೇ ಪ್ರತಿಯೊಬ್ಬರು ಒಂದೊಂದು ಕೊಠಡಿ ನಿರ್ಮಿಸಿದ್ದರು. ಜಿ.ಐ. ಬಾಗೇವಾಡಿ ಅವರು ಅಂದಿನ ಕಾಲದಲ್ಲಿ ವಿಎಸ್‌ಎಂ ಹಾಗೂ ಕೆಎಲ್‌ಇ ಎರಡೂ ಸಂಸ್ಥೆಗಳಿಗೆ ತಲಾ ₹1 ಲಕ್ಷ ದೇಣಿಗೆ ನೀಡಿದ್ದರು’ ಎಂದರು.

ಫೌಂಡೇಶನ್ ಅಧ್ಯಕ್ಷ ರುದ್ರಕುಮಾರ ಕೋಠಿವಾಲೆ, ಮಂಡಳದ ನಿರ್ದೇಶಕ ಸಂಜಯ ಶಿಂತ್ರೆ, ಫೌಂಡೇಶನ್ ನಿರ್ದೇಶಕ ವಿನಾಯಕ ಪಾಟೀಲ, ಸಿಇಓ ಡಾ. ಸಿದ್ಧಗೌಡ ಪಾಟೀಲ ಮಾತನಾಡಿದರು.

ಮಂಡಳದ ಕಾರ್ಯದರ್ಶಿ ಸಮೀರ ಬಾಗೇವಾಡಿ, ನಿರ್ದೇಶಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀನ ಪಾಟೀಲ, ಶೇಖರ ಪಾಟೀಲ, ಗಣೇಶ ಖಡೇದ, ಫೌಂಡೇಶನ್ ನಿರ್ದೇಶಕ ಸಂತೋಷ ಕೋಠಿವಾಲೆ, ಪ್ರಲ್ಹಾದ ನರಕೆ, ಡಾ. ಉಮೇಶ ಪಾಟೀಲ, ಯಲ್ಲಪ್ಪ ಹಂಡಿ, ಜ್ಞಾನದೇವ ನಾಯಿಕ, ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರುಗಳಾದ ಬಸವರಾಜ ಕರೋಶಿ, ಚಿದಂಬರ ಜೋಶಿ, ಪ್ರಕಾಶ ಐನಾಪುರೆ, ಗಜಾನನ ಕಮತೆ, ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪಿಯು ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ ಸ್ವಾಗತಿಸಿದರು. ಉಪನ್ಯಾಸಕ ಸಂಜಯ ಮುತ್ನಾಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.