ADVERTISEMENT

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ‘ಎಐ’ ಬಳಕೆಗೆ ಚಿಂತ‌‌ನೆ’

ಪ್ರಶ್ನೆಪತ್ರಿಕೆ ರಚನೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ 

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 23:55 IST
Last Updated 23 ಸೆಪ್ಟೆಂಬರ್ 2025, 23:55 IST
ಪ್ರೊ.ಎಸ್.ವಿದ್ಯಾಶಂಕರ
ಪ್ರೊ.ಎಸ್.ವಿದ್ಯಾಶಂಕರ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ವಿವಿಧ ತಾಂತ್ರಿಕ ಕೋರ್ಸ್‌ಗಳ ಪ್ರಶ್ನೆಪತ್ರಿಕೆ ರಚನೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಳ್ಳಲು ಚಿಂತನೆ ನಡೆಸಿದೆ.

ಎಂಬಿಎ ಓದುತ್ತಿರುವ 480 ವಿದ್ಯಾರ್ಥಿಗಳು ‘ವಿಟಿಯು ಕ್ಯಾಂಪಸ್‌ನಲ್ಲಿ ಇದ್ದಾರೆ. ಆರಂಭಿಕ ಹಂತದಲ್ಲಿ ಅವರಿಗಾಗಿ ಪ್ರಶ್ನೆಪತ್ರಿಕೆ ರಚಿಸಲು ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಇದೇ ಶೈಕ್ಷಣಿಕ ವರ್ಷದಿಂದ ಎ.ಐ ತಂತ್ರಜ್ಞಾನ ಬಳಸಲು ಯೋಜಿಸಿದ್ದೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂಜಿನಿಯರಿಂಗ್‌, ಎಂಬಿಎ ಸೇರಿ ವಿವಿಧ ತಾಂತ್ರಿಕ ಕೋರ್ಸ್‌ಗಳಿಗೆ ವಿಷಯ ತಜ್ಞರ ತಂಡ ಪ್ರಶ್ನೆಪತ್ರಿಕೆ
ಸಿದ್ಧಪಡಿಸುತ್ತಿದೆ. ಈಗ ವಿಟಿಯು ಕ್ಯಾಂಪಸ್‌ಗೆ ಸೀಮಿತವಾಗಿ, ಎಂಬಿಎ ಕೋರ್ಸ್‌ ಪ್ರಶ್ನೆಪತ್ರಿಕೆ ರಚನೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಎಐ ಬಳಸುತ್ತೇವೆ. ವಿಷಯ ತಜ್ಞರೂ ಪರಿಶೀಲಿಸಲಿದ್ದಾರೆ. ಸಾಧಕ–ಬಾಧಕ ಆಧರಿಸಿ, ಉಳಿದ ಕೋರ್ಸ್‌ಗಳ ಪ್ರಶ್ನೆಪತ್ರಿಕೆ ರಚನೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ವಿಸ್ತರಿಸುತ್ತೇವೆ’
ಎಂದರು.

ADVERTISEMENT

‘ಪರೀಕ್ಷೆ ಮತ್ತು ಮೌಲ್ಯಮಾಪನ ನಿಯಮಗಳ ಪ್ರಕಾರ, ಮೊದಲ ಮತ್ತು ದ್ವಿತೀಯ ಹಂತದ ಮೌಲ್ಯಮಾಪನಕ್ಕೆ ಅಂಕಗಳ ವ್ಯತ್ಯಾಸ 15ಕ್ಕಿಂತ ಕಡಿಮೆ ಇದ್ದರೆ, ಮೌಲ್ಯಮಾಪಕರ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಂಬಿಎ ಕೋರ್ಸ್‌ನ ಉತ್ತರ ಪತ್ರಿಕೆಗಳ ಪ್ರಥಮ ಹಂತದ ಮೌಲ್ಯಮಾಪನವನ್ನು ಅಧ್ಯಾಪಕರು ಮಾಡುತ್ತಾರೆ. ಎ.ಐ ಬಳಸಿ ದ್ವಿತೀಯ ಹಂತದ
ಮೌಲ್ಯಮಾಪನ ನಡೆಸಲು ಯೋಜಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.