
ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಜ್ಞಾನಸಂಗಮ ಆವರಣದಲ್ಲಿ ಫೆ.27, 28ರಂದು ‘ಯುಕ್ತಿ–2026’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
27ರಂದು ಬೆಳಿಗ್ಗೆ 10.30ಕ್ಕೆ ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಚಲನಚಿತ್ರ ನಟಿಯರಾದ ಸೋನಾಲ್ ಮೊಂಥೆರೊ, ಸಪ್ತಮಿ ಗೌಡ, ನಟರಾದ ಪ್ರಮೋದ್ ಶೆಟ್ಟಿ, ತರುಣ ಸುಧೀರ್ ಆಗಮಿಸುವರು. ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಅಧ್ಯಕ್ಷತೆ ವಹಿಸುವರು.
ಮೊದಲ ದಿನದ ರಸಸಂಜೆ ಕಾರ್ಯಕ್ರಮವನ್ನು ವಿದುಷಿ ವೀಣಾ ಶ್ರೀವಾಣಿ(ಸತ್ಯವಾಣಿ) ಅವರು ವೀಣಾ ವಾದನದ ಮೂಲಕ ನಡೆಸಿಕೊಡುವರು. ಎರಡನೇ ದಿನದ ರಸಸಂಜೆ ಕಾರ್ಯಕ್ರಮವನ್ನು ಗಾಯಕಿ ನೇಹಾ ಕಾಕ್ಕರ್ ನಡೆಸಿಕೊಡುವರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನೃತ್ಯ, ನಾಟಕ, ಫ್ಯಾಷನ್ ಷೋ, ಟೆಕ್ನೋ ಮತ್ತಿತರ ಸ್ಪರ್ಧೆ ನಡೆಯಲಿವೆಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.