ADVERTISEMENT

ಸಸಿಗಳನ್ನು ನೆಟ್ಟು ಬೆಳೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 14:06 IST
Last Updated 5 ಜುಲೈ 2021, 14:06 IST
ನಾಗರಮುನ್ನೋಳಿ ಸಮೀಪದ ಹಂಚನಾಳ ಕೆ.ಕೆ. ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮುಖಂಡರು ಚಾಲನೆ ನೀಡಿದರು
ನಾಗರಮುನ್ನೋಳಿ ಸಮೀಪದ ಹಂಚನಾಳ ಕೆ.ಕೆ. ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮುಖಂಡರು ಚಾಲನೆ ನೀಡಿದರು   

ನಾಗರಮುನ್ನೋಳಿ (ಬೆಳಗಾವಿ ಜಿಲ್ಲೆ): ಸಮೀಪದ ಹಂಚನಾಳ ಕೆ.ಕೆ. ಗ್ರಾಮದ ಅಮೋಘ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಯಬಾಗ ಮಂಡಲದಿಂದ ಶಾಮ್‌ಪ್ರಸಾದ್‌ ಮುಖರ್ಜಿ ಪುಣ್ಯಸ್ಮರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಸೋಮವಾರ ನಡೆಯಿತು.

ಚಾಲನೆ ನೀಡಿದ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ‘ಈಗ ನೆಟ್ಟಿರುವ ಸಸಿಗಳು ಮರವಾಗಿ ಮುಂದಿನ ಪೀಳಿಗೆಗೆ ವರದಾನ ಆಗಬೇಕು. ಈ ಉದ್ದೇಶದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು. ರೈತರು ತಮ್ಮ ಜಮೀನಿನ ಬದುವಿನಲ್ಲಿ ಗಡಿಗಳನ್ನು ನೆಟ್ಟು ಪೋಷಿಸಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಸಾವು–ನೋವು ವರದಿಯಾಗಿದೆ. ಅನೇಕ ನಾಯಕರು, ಸಂಬಂಧಿಕರನ್ನು ಕಳೆದುಕೊಂಡಿದ್ದೇವೆ. ಮುಂದೆಯೂ ತಪ್ಪು ಮರುಕಳಿಸದಂತೆ ಗ್ರಾಮೀಣ ಪ್ರದೇಶದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು. 2–3 ತಿಂಗಳವರೆಗೆ ಜಾತ್ರೆ, ಉತ್ಸವ, ಮದುವೆ ಮೊದಲಾದ ಸಮಾರಂಭಗಳಿಂದ ದೂರವಿರಬೇಕು’ ಎಂದು ತಿಳಿಸಿದರು.

ADVERTISEMENT

‘ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವಂತಹ ಅಭ್ಯಾಸ ಮುಂದುವರಿಸಬೇಕು’ ಎಂದರು.

ಮುಖಂಡ ಮಹೇಶ ಭಾತೆ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿದರು.

ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೋಣವಾಡೆ, ಒಬಿಸಿ ಮೋರ್ಚಾ ಅಧ್ಯಕ್ಷ ಬಸು ಮಾಳಗೆ,ಮುಖಂಡರಾದ ಸುರೇಶ ಬೆಲ್ಲದ, ವಿಜಯ ಕೋಠಿವಾಲೆ, ರವಿ ಹಿರೇಕೊಡಿ, ರಮೇಶ ಕಾಳನ್ನವರ, ಸದಾಶಿವ ಹುಂಜ್ಯಾಗೋಳ, ಸಂತೋಷ ಪಾಟೀಲ, ಸಿದ್ದು ಖಿಂಡಿ, ರಾಯಗೌಡ ಕೆಳಗಿನಮನಿ ಇದ್ದರು.

ರಾಜು ಹರಗನ್ನವರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.