ಬೆಳಗಾವಿ: ಕೋವಿಡ್ ಸೋಂಕಿನಿಂದ ಗುಣಮುಖವಾಗಿ ಮರಳಿದ ವ್ಯಕ್ತಿಗೆ ಇಲ್ಲಿನ ಖಡಕ್‌ಗಲ್ಲಿ ನಿವಾಸಿಗಳು ಆರತಿ ಬೆಳಗಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ.
35 ವರ್ಷದ ವ್ಯಕ್ತಿಯು ಬರುತ್ತಿದ್ದಂತೆಯೇ, ಸೀಲ್‌ಡೌನ್ ಬ್ಯಾರಿಕೇಡ್‌ಗೆ ಕಟ್ಟಿದ್ದ ರಿಬ್ಬನ್ ಕಟ್ ಮಾಡಿಸಿದ ಸ್ಥಳೀಯರು ಹಾಗೂ ಕುಟುಂಬದವರು ಹೂಮಾಲೆಗಳನ್ನು ಹಾಕಿ ಬರಮಾಡಿಕೊಂಡರು. ಮನೆಯಲ್ಲೂ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು.
ಈಚೆಗೆ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಾನುವಾರ ಬಿಡುಗಡೆ ಆಗಿದ್ದರು.
ಸ್ಥಳೀಯರು ಮಾಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.