ADVERTISEMENT

ಬೆಳಗಾವಿ | ಇಬ್ಬರು ಮಕ್ಕಳೊಂದಿಗೆ ಪತ್ನಿ ಕಾಣೆ: ಪತಿಯಿಂದ ದೂರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 14:07 IST
Last Updated 5 ಜನವರಿ 2025, 14:07 IST

ಬೆಳಗಾವಿ: ‘ತಮ್ಮ ಪತ್ನಿ ಮಾಸಾಬಿ ಅವರು ಇಬ್ಬರು ಮಕ್ಕಳೊಂದಿಗೆ ಕಾಣೆಯಾದ ಕುರಿತು ಪತಿ ಆಸಿಫ್ ಸಯ್ಯದ್ ಮಾರಿಹಾಳ ಠಾಣೆಯಲ್ಲಿ ಜ.2ರಂದು ದೂರು ದಾಖಲಿಸಿದ್ದಾರೆ. ಮೂವರ ಹುಡುಕಾಟ ನಡೆಸಿದ್ದೇವೆ’ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾನಾಪುರ ತಾಲ್ಲೂಕಿನ ನಂದಗಡದವರಾದ ಆಸಿಫ್ ವೃತ್ತಿಯಲ್ಲಿ ಚಾಲಕರಾಗಿದ್ದಾರೆ. ಪತ್ನಿಯ ಊರಾದ ಮಾರಿಹಾಳದಲ್ಲಿ ನಾಲ್ಕು ವರ್ಷಗಳಿಂದ ವಾಸವಿದ್ದರು. ಈಗ ಪತ್ನಿ, ಇಬ್ಬರು ಮಕ್ಕಳನ್ನು ಹುಡುಕಿಕೊಡುವಂತೆ ಅವರು ಮನವಿ ಮಾಡಿದ್ದಾರೆ’ ಎಂದರು.

‘ಅವರು ಕೊಟ್ಟಿರುವ ದೂರಿನಲ್ಲಿ ₹5 ಲಕ್ಷ ನಗದು, 60 ಗ್ರಾಂ ಚಿನ್ನ, ಮನೆಯಲ್ಲಿದ್ದ ಕಾರು ಹಾಗೂ ಆಸ್ತಿಯ ದಾಖಲೆಯೊಂದಿಗೆ ಪತ್ನಿ ಪರಾರಿಯಾದ ಕುರಿತು ಮಾಹಿತಿ ನೀಡಿಲ್ಲ. ಆದರೂ, ಆ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.