ADVERTISEMENT

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:01 IST
Last Updated 29 ಸೆಪ್ಟೆಂಬರ್ 2022, 16:01 IST
   

ಗೋಕಾಕ (ಬೆಳಗಾವಿ ಜಿಲ್ಲೆ): ಇಲ್ಲಿನ ಖಿಲ್ಲೆ ಪ್ರದೇಶದ ಮನೆಯೊಂದರ ಹೊರ ಆವರಣದಲ್ಲಿ ಗುರುವಾರ ನೇಣು ಬಿಗಿದಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ.

ಮೃತರನ್ನು ನಗರದ ಮರಾಠಾ ಓಣಿಯ ನಿವಾಸಿ ರೇಷ್ಮಾ ಉರೂಫ್‌ ಜಬೀನಾ ಮುಲ್ಲಾ (40) ಎಂದು ಗುರುತಿಸಲಾಗಿದೆ. ಮಹಿಳೆ ಸಾವಗೀಡಾಗಿದ್ದು ಬೇರೆಯವರ ಮನೆ. ಮನೆಯ ಮಾಲೀಕರು ಬೆಳಿಗ್ಗೆ ಎದ್ದು ನೋಡಿ ಬೆಚ್ಚಿ ಬಿದ್ದರು. ಈ ಮಹಿಳೆಯ ಯಾವಾಗ ಇಲ್ಲಿಗೆ ಬಂದು, ಮನೆಯ ವರಾಂಡದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಸಾವು ಅನುಮಾನಾಸ್ಪದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.