ADVERTISEMENT

ಮಗುಚಿದ ಬಸ್‌: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:36 IST
Last Updated 3 ಜೂನ್ 2025, 15:36 IST
ಮಮದಾಪುರ ಸಮೀಪದ ಬೆನಚಿನಮರಡಿ(ಕೊಳವಿ) ಬಳಿ ಮಂಗಳವಾರ ಮಗುಚಿದ ಬಸ್‌ ಅನ್ನು ಕ್ರೇನ್‌ ಮೂಲಕ ಎತ್ತಲಾಯಿತು
ಮಮದಾಪುರ ಸಮೀಪದ ಬೆನಚಿನಮರಡಿ(ಕೊಳವಿ) ಬಳಿ ಮಂಗಳವಾರ ಮಗುಚಿದ ಬಸ್‌ ಅನ್ನು ಕ್ರೇನ್‌ ಮೂಲಕ ಎತ್ತಲಾಯಿತು   

ಮಮದಾಪುರ: ಗೋಕಾಕ ತಾಲ್ಲೂಕಿನ ಬೆನಚಿನಮರಡಿ (ಕೊಳವಿ) ಬಳಿ ಮಂಗಳವಾರ ಸಾರಿಗೆ ಸಂಸ್ಥೆಯ ಬಸ್‌ ಮಗುಚಿದ ಕಾರಣ ಮಹಿಳಾ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪ‍ಟ್ಟಿದ್ದಾರೆ. 15ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬೆನಚಿನಮರಡಿ (ಕೊಳವಿ) ಗ್ರಾಮದ ಯಲ್ಲವ್ವ ಸಿದ್ದರಾಮ ಬಿರನಗಡ್ಡಿ(70) ಮೃತರು.

ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಗೋಕಾಕ- ಬೈಲಹೊಂಗಲ ಮಾರ್ಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್‌ ರಸ್ತೆ ಪಕ್ಕದಲ್ಲಿ ಮಗುಚಿದೆ. ಸ್ಥಳೀಯರು ಕಿಟಕಿಯ ಗಾಜುಗಳನ್ನು ಒಡೆದು, ಗಾಯಗೊಂಡ ಪ್ರಯಾಣಿಕರನ್ನು ಹೊರತೆಗೆದರು. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ರವಾನಿಸಲಾಯಿತು.

ADVERTISEMENT

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.