ADVERTISEMENT

ಕ್ಷೇತ್ರದ ಜನರಲ್ಲಿದ್ದ ಅನಾಥ ಪ್ರಜ್ಞೆ ದೂರಾಗಿದೆ: ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:31 IST
Last Updated 12 ಫೆಬ್ರುವರಿ 2021, 15:31 IST
ಬೆಳಗಾವಿ ತಾಲ್ಲೂಕಿನ ಎಳೆಬೈಲ್ ಗ್ರಾಮದಲ್ಲಿ ದುರ್ಗಾಮಾತಾ ಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸ್ಥಳೀಯರೊಂದಿಗೆ ಶುಕ್ರವಾರ ಚಾಲನೆ ನೀಡಿದರು
ಬೆಳಗಾವಿ ತಾಲ್ಲೂಕಿನ ಎಳೆಬೈಲ್ ಗ್ರಾಮದಲ್ಲಿ ದುರ್ಗಾಮಾತಾ ಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸ್ಥಳೀಯರೊಂದಿಗೆ ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ಜನರಲ್ಲಿದ್ದ ಅನಾಥ ಪ್ರಜ್ಞೆ ದೂರಾಗಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕ್ಷೇತ್ರದ ಎಳೆಬೈಲ್ ಗ್ರಾಮದಲ್ಲಿ ದುರ್ಗಾಮಾತಾ ಮಂದಿರ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಶಾಸಕಿಯಾಗುವ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಜನರಲ್ಲಿದ್ದ ಅಭಿವೃದ್ಧಿಯ ಕನಸುಗಳು ಕಮರಿ ಹೋಗುವ ಸ್ಥಿತಿಯಲ್ಲಿದ್ದವು. ಜನಪ್ರತಿನಿಧಿಗಳು ಮತ್ತು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆದರೆ, ನಾನು ಜನರಿಗೆ ಹತ್ತಿರವಾಗಿ ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದೇನೆ. ಭರವಸೆಗಳನ್ನೆಲ್ಲ ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ. ಈಗ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ’ ಎಂದರು.

ADVERTISEMENT

‘ಪ್ರತಿ ಬಾರಿ ಬೆಂಗಳೂರಿಗೆ ಹೋಗುವಾಗಲೂ ಹತ್ತಾರು ಪ್ರಸ್ತಾವಗಳನ್ನು ಹೊತ್ತೊಯ್ಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಹಲವು ದಶಕಗಳಿಂದ ಆಗಿರುವ ಹಿನ್ನಡೆ ಸರಿದೂಗಿಸಲು ಶಕ್ತಿ ಮೀರಿ ಯತ್ನಿಸಿದ್ದೇನೆ’ ಎಂದು ತಿಳಿಸಿದರು.

ಹಿರಿಯರು, ಯುವರಾಜ ಕದಂ, ಮನೋಹರ ಬೆಳಗಾಂವಕರ, ಶಿವಾಜಿ ಬೆಟಗೇರಿಕರ, ಮಹೇಶ ಪಾಟೀಲ, ಮನೋಹರ ಪಾಟೀಲ, ರಾವಳು ಪಾಟೀಲ, ಪ್ರೇಮಾ ಬಾಳೇಕುಂದ್ರಿ, ದುರ್ಗು ಪಾಟೀಲ, ಪರುಶರಾಮ ಪಾಟೀಲ, ಮಲ್ಲಪ್ಪ ಮರಗಾಳೆ, ಮಾರುತಿ‌ ದತ್ತು ಪಾಟೀಲ, ವಿಠ್ಠಲ ಔಳಕರ, ನಾಮದೇವ, ಮರಗಾಳೆ, ಓಮನಿ, ಗುಂಡು ಪಾಟೀಲ, ಮೋನಪ್ಪ ಮರಗಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.