ADVERTISEMENT

‘ಸಂಶೋಧನೆಯಿಂದ ಸಮಾಜದ ಏಳಿಗೆ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:22 IST
Last Updated 25 ಅಕ್ಟೋಬರ್ 2019, 13:22 IST
ಬೆಳಗಾವಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಕಾಲೇಜಿನಲ್ಲಿ ನಡೆದ ‘ಸಂಶೋಧನಾ ಬರಹ’ ಕಾರ್ಯಾಗಾರದಲ್ಲಿ ಪ್ರೊ.ತ್ಯಾಗರಾಜ ಮಾತನಾಡಿದರು. ಜಗದೀಶ ಸವದತ್ತಿ, ಪ್ರೊ.ನಿರ್ಮಲಾ ಗಡಾದ ಇದ್ದಾರೆ
ಬೆಳಗಾವಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಕಾಲೇಜಿನಲ್ಲಿ ನಡೆದ ‘ಸಂಶೋಧನಾ ಬರಹ’ ಕಾರ್ಯಾಗಾರದಲ್ಲಿ ಪ್ರೊ.ತ್ಯಾಗರಾಜ ಮಾತನಾಡಿದರು. ಜಗದೀಶ ಸವದತ್ತಿ, ಪ್ರೊ.ನಿರ್ಮಲಾ ಗಡಾದ ಇದ್ದಾರೆ   

ಬೆಳಗಾವಿ: ‘ಸಂಶೋಧನೆಯಿಂದ ಸಮಾಜದ ಏಳಿಗೆ ಸಾಧ್ಯ. ವಿದ್ಯಾರ್ಥಿಗಳು, ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೊ.ಸಿ.ಎಂ. ತ್ಯಾಗರಾಜ ತಿಳಿಸಿದರು.

ಇಲ್ಲಿನ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಸಂಶೋಧನಾ ಬರಹ’ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.‘ನಿರಂತರ ಸಂಶೋಧನೆಯಿಂದಾಗಿ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯನಾಗಿ ಹೊರಹೊಮ್ಮುತ್ತಾನೆ’ ಎಂದರು.

ಆರ್‌ಸಿಯು ಗ್ರಂಥಾಲಯ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ವಿ.ಎಂ. ಬಂಕಾಪುರ ಸಂಶೋಧನಾ ಬರಹದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿ ಅಧ್ಯಕ್ಷ ಜಗದೀಶ ಸವದತ್ತಿ, ‘ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರು ಸಂಶೋಧನೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಂಘಟಕ ಡಾ.ಭರತೇಶ ಅಲಸಂದಿ ಅವರನ್ನು ಸನ್ಮಾನಿಸಲಾಯಿತು.ಜಗದೀಶ ಎ. ಸವದತ್ತಿ ಪಿಯು ಕಾಲೇಜು ಪ್ರಾಂಶುಪಾಲ ವಿ.ಬಿ. ತುರಮರಿ ಇದ್ದರು.ಸ್ವರಾಂಜಲಿ ತಂಡದವರು ಸ್ವಾಗತ ಗೀತೆ ಹಾಡಿದರು. ಮಹಾವೀರ ಪಿ.ಮಿರ್ಜಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ ಐ. ಗಡಾದ ಸ್ವಾಗತಿಸಿದರು. ಪ್ರೊ.ಮಹೇಶ ಪೂಜಾರಿ ಮತ್ತು ಪ್ರೊ.ಮುಬೀನ ಸೈಯದ್ ಪರಿಚಯಿಸಿದರು. ಪ್ರೊ.ನಾಗವೇಣಿ ಧರೆಣ್ಣವರ ನಿರೂಪಿಸಿದರು. ಡಾ.ಸುಪ್ರಿಯಾ ಬೆಳವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.