ADVERTISEMENT

ಮಾಳಿ, ಮಾಲಗಾರ ಎಂದೇ ಬರೆಸಿ: ಕುಲಿಗೋಡ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:50 IST
Last Updated 26 ಸೆಪ್ಟೆಂಬರ್ 2025, 2:50 IST
ಸಿ.ಬಿ. ಕುಲಿಗೋಡ
ಸಿ.ಬಿ. ಕುಲಿಗೋಡ   

ಮುಗಳಖೋಡ: ‘ರಾಜ್ಯದ ಮಾಳಿ, ಮಾಲಗಾರ ಸಮಾಜದವರು ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಮಾಳಿ/ ಮಾಲಗಾರ ಎಂದು ಬರೆಸಬೇಕು’ ಎಂದು ಸಮಾಜದ ನಿಯೋಗದ ಅಧ್ಯಕ್ಷ ಸಿ.ಬಿ. ಕುಲಿಗೋಡ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಳಿ ಮಾಲಗಾರ ಸಮಾಜದ ಜನರು ತಪ್ಪದೆ  ತಮ್ಮ ಸಂಬಂಧಿಕರಿಗೆ ಮೇಲೆ ತಿಳಿಸಿದ ರೀತಿಯಲ್ಲಿ ಬರೆಸಲು ವಿನಂತಿ ಮಾಡಿಕೊಳ್ಳಿ. ಸಮಾಜದ  ಮುಂದಿನ ಪೀಳಿಗೆಗೆ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಇದು ಅನುಕೂಲ’ ಎಂದು ತಿಳಿಸಿದ್ದರೆ.

ಸಮಾಜದ ಅಧ್ಯಕ್ಷ  ಕಾಡು ಮಾಳಿ, ಮಹಾಂತೇಶ ಮಾಳಿ, ಗಿರೀಶ ಬುಟಾಳೆ, ಚೇತನ್ ಯಡವನ್ನವರ, ಗಿರೀಶ  ದಿವಾನಮಳ್ಳ, ಕಾಶಿನಾಥ ಮಾಳಿ, ಡಾ.ರವಿ ಕುರಬೇಟ್, ಸಂಜಯ ಅಥಣಿ, ಸದಾಶಿವ ಹೊಸಮನಿ, ಬಸವರಾಜ ಪಾಟೀಲ, ಬಸವಣ್ಣೆಪ್ಪ ಬಂಬಲವಾಡ, ನಾಗೇಶ ಕಿವಡೆ, ರವಿ ಮಾಳಿ, ಶ್ರೀಶೈಲ ಅಫಜಲಪೂರ, ಅಪ್ಪಾಸಾಹೇಬ ಕುಲಗುಡೆ, ಅಶೋಕ ಕುಲಿಗೋಡ, ಗುರುಪಾದ ಮೆಂಡಿಗೇರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.