ADVERTISEMENT

ಉಗರಗೋಳ | ಸೀಗೆಹುಣ್ಣಿಮೆಗೆ ಹರಿದು ಬಂದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:19 IST
Last Updated 8 ಅಕ್ಟೋಬರ್ 2025, 5:19 IST
ಯಲ್ಲಮ್ಮನ ಗುಡ್ಡದಲ್ಲಿ ಮಂಗಳವಾರ ಶೀಗಿಹುಣ್ಣಿಮೆ ಅಂಗವಾಗಿ ಅಪಾರ ಭಕ್ತರು ಬಂದ ಕಾರಣ ಸಂಚಾರ ದಟ್ಟಣೆ ಉಂಟಾಯಿತು
ಯಲ್ಲಮ್ಮನ ಗುಡ್ಡದಲ್ಲಿ ಮಂಗಳವಾರ ಶೀಗಿಹುಣ್ಣಿಮೆ ಅಂಗವಾಗಿ ಅಪಾರ ಭಕ್ತರು ಬಂದ ಕಾರಣ ಸಂಚಾರ ದಟ್ಟಣೆ ಉಂಟಾಯಿತು   

ಉಗರಗೋಳ: ಯಲ್ಲಮ್ಮಗುಡ್ಡದಲ್ಲಿ ಮಂಗಳವಾರ ಸೀಗೆ ಹುಣ್ಣಿಮೆ ಅಂಗವಾಗಿ ಬೃಹತ್ ಜಾತ್ರೆ ಜರುಗಿತು. ಬೆಳಿಗ್ಗೆಯಿಂದ ಗುಡ್ಡದತ್ತ ಹರಿದು ಬಂದ ಲಕ್ಷಾಂತರ ಭಕ್ತರು, ಆದಿಶಕ್ತಿ ರೇಣುಕಾದೇವಿಗೆ ಪೂಜೆ ಸಲ್ಲಿಸಿ ವಿಶೇಷ ದರ್ಶನ ಪಡೆದರು. ಗುಡ್ಡದ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ಭಕ್ತರು ‍ಪರದಾಡಿದರು.

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಭಕ್ತರ ದಂಡು ಯಲ್ಲಮ್ಮನ ಸಾನ್ನಿಧ್ಯದತ್ತ ಮುಖ ಮಾಡಿತು. ಎತ್ತ ನೋಡಿದರೂ ಜನಜಾತ್ರೆಯೇ ಕಣ್ಣಿಗೆ ಕಂಡಿತು. ಭಕ್ತರು ಮಲಪ್ರಭೆ ಮಡಿಲಲ್ಲಿನ ಜೋಗುಳಬಾವಿ, ಎಣ್ಣೆಹೊಂಡದಲ್ಲಿ ಪವಿತ್ರಸ್ನಾನ ಮಾಡಿ, ಹೋಳಿಗೆ, ಕಡಬು, ವಡೆ, ಭಜಿ ಮೊದಲಾದ ಖಾದ್ಯಗಳನ್ನು ತಯಾರಿಸಿ ಪರಡಿ ತುಂಬಿದರು. ಸೀಗೆ ಹುಣ್ಣಿಮೆ ಜಾತ್ರೆಯು ರೈತರ ಜಾತ್ರೆಯಂದೇ ಖ್ಯಾತಿ ಪಡದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT