ADVERTISEMENT

ಶಾಹೂನಗರ: ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:19 IST
Last Updated 21 ಜೂನ್ 2021, 14:19 IST
ಬೆಳಗಾವಿಯ ಶಾಹೂನಗರದ ಸಂಕಲ್ಪ ಯೋಗ ಕೇಂದ್ರದಲ್ಲಿ ಯೋಗ ದಿನವನ್ನು ಸೋಮವಾರ ಆಚರಿಸಲಾಯಿತು
ಬೆಳಗಾವಿಯ ಶಾಹೂನಗರದ ಸಂಕಲ್ಪ ಯೋಗ ಕೇಂದ್ರದಲ್ಲಿ ಯೋಗ ದಿನವನ್ನು ಸೋಮವಾರ ಆಚರಿಸಲಾಯಿತು   

ಬೆಳಗಾವಿ: ಇಲ್ಲಿನ ಶಾಹೂನಗರದ ಸಂಕಲ್ಪ ಯೋಗ ಕೇಂದ್ರದ ಸಹಯೋಗದಲ್ಲಿ ಯೋಗ ದಿನವನ್ನು ಆಚರಿಸಲಾಯಿತು.

ಈ ವೇಳೆ ಸಂಕಲ್ಪ ಯೋಗ ಕೇಂದ್ರದ ಅಧ್ಯಕ್ಷೆ ಆರತಿ ಸಂಕೇಶ್ವರಿ ಮಾತನಾಡಿ, ‘ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಈಗಿನ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ ಸಹಕಾರಿಯಾಗಿದೆ. ಕೇಂದ್ರದಿಂದ ವರ್ಚುವಲ್‌ ವೇದಿಕೆಯಲ್ಲಿ ಒಂದು ವಾರದವರೆಗೆ ಉಚಿತವಾಗಿ ಶಿಬಿರ ಆಯೋಜಿಸಲಾಗಿತ್ತು. ನಗರದವರೊಂದಿಗೆ ಜಿಲ್ಲೆಯ ವಿವಿಧೆಡೆಯಿಂದ ಅನೇಕರು ಭಾಗವಹಿಸಿದ್ದರು. ಇದರೊಂದಿಗೆ ಶಿಬಿರ ಯಶಸ್ವಿಯಾಗಿದೆ’ ಎಂದು ಹೇಳಿದರು.

‘ಮಾಂಜರಿಯ ಧ್ಯಾನ ಪ್ರಭೋದಿಸಿ ಮಂದಿರ ಶಾಲೆಯ ಪ್ರಾಂಶುಪಾಲ ಜಗದೀಶ ಕುಂತೆ, ಮಹಿಳಾ ವಿದ್ಯಾಲಯದ ಪ್ರಾಂಶುಪಾಲೆ ಶೋಭಾ ಶಾನಭಾಗ್‌ ಮತ್ತು ಕವಿತಾ, ಎಂ.ವಿ. ಹೆರವಾಡಕರ ಶಾಲೆಯ ಎಸ್‌.ವೈ. ಪ್ರಭು ಹಾಗೂ ವೃಂದಾ, ಯಕ್ಸಂಬಾದ ಶಿವಶಂಕರ ಜೊಲ್ಲೆ ಶಾಲೆಯ ಪ್ರಾಂಶುಪಾಲೆ ಗೀತಾ ನಾಯ್ಡು ಮತ್ತು ರಮ್ಜಾನ್, ನಿಪ್ಪಾಣಿಯ ಊರ್ಮಿಳಾ ಚೌಗಲೆ, ರಾಜು ಪವಾರ್‌ ಮೊದಲಾದವರು ಪಾಲ್ಗೊಂಡಿದ್ದರು.

ADVERTISEMENT

ದಕ್ಷಾ ಬೇವಿನಮರದ ಹಾಗೂ ಅಥರ್ವ ಎಸ್. ಯೋಗ ನಾಟ್ಯ ಪ್ರಸ್ತುತಪಡಿಸಿದರು. ಗೌತಮಿ ಖಾನಾಪುರೆ ಯೋಗಾಸನ ಪ್ರಸ್ತುತಪಡಿಸಿದರು. ರವಿ ಸಂಕೇಶ್ವರಿ ಸಂಯೋಜಿಸಿದರು. ಅಮೋಲ್ ಜೈನ್‌ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.