ADVERTISEMENT

‘ಸೂರ್ಯ ನಮಸ್ಕಾರ’ದಲ್ಲಿ ದಾಖಲೆ

10 ನಿಮಿಷದಲ್ಲಿ 112 ಸೂರ್ಯ ನಮಸ್ಕಾರ ಮಾಡಿದ ತುಕಾರಾಮ

ಸುಧಾಕರ ಎಸ್.ತಳವಾರ, ಬೆಂಗಳೂರು
Published 13 ಫೆಬ್ರುವರಿ 2020, 9:05 IST
Last Updated 13 ಫೆಬ್ರುವರಿ 2020, 9:05 IST
ಸೂರ್ಯ ನಮಸ್ಕಾರದಲ್ಲಿ ತೊಡಗಿರುವ ತುಕಾರಾಮ ಕೋಳಿ ಅವರ ದೃಶ್ಯ
ಸೂರ್ಯ ನಮಸ್ಕಾರದಲ್ಲಿ ತೊಡಗಿರುವ ತುಕಾರಾಮ ಕೋಳಿ ಅವರ ದೃಶ್ಯ   

ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ ಗ್ರಾಮದ ತುಕಾರಾಮ ಕೋಳಿ(47) ಯೋಗ ಪಟು. 3 ವರ್ಷಗಳ ಹಿಂದೆ ಆರೋಗ್ಯ ಸುಧಾರಣೆಗಾಗಿ ರೂಢಿಸಿ ಕೊಂಡ ಯೋಗಾಭ್ಯಾಸ ಅವರ ಹೆಸರನ್ನುಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸೇರುವಂತೆ ಮಾಡಿದೆ.

ಕಲ್ಲೋಳ ಗ್ರಾಮದ ಉತ್ತರದಲ್ಲಿ ಪ್ರಶಾಂತವಾಗಿರುವ ಹರಿಯುವ ಕೃಷ್ಣೆಯ ತೀರ. ಸೂರ್ಯ ಮೂಡುವ ಸಮಯ, ಮೈ ಕೊರೆಯುವ ಚುಮು ಚುಮು ಚಳಿ, ಇದರ ಮಧ್ಯದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಸೂರ್ಯ ಸಮಸ್ಕಾರ ಹಾಕುತ್ತಾರೆ.

‘ಆರೋಗ್ಯವನ್ನು ಸುಧಾರಿಸಿ ಕೊಳ್ಳುವ ಉದ್ದೇಶ ದಿಂದಲೇ ವ್ಯಾಯಾಮ ಆರಂಭಿಸಿದೆ. ಪ್ರತಿ ದಿನ ಕೈಗೊಳ್ಳುವ ಯೋಗಾಭ್ಯಾಸ ಆಸಕ್ತಿಯನ್ನು ಹೆಚ್ಚುತ್ತಾ ಹೋಯಿತು.ಬಾಲ್ಯದಿಂದಲೂ ಯೋಗ, ವ್ಯಾಯಾಮ ದತ್ತ ವಿಶೇಷ ಆಸಕ್ತಿ ಹೊಂದಿದ್ದ ನನಗೆ ಕೆಲಸದ ಒತ್ತಡಗಳಲ್ಲಿ ಯೋಗಾಭ್ಯಾಸ ರೂಢಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಮೂರು ವರ್ಷದಿಂದ ಆರಂಭವಾದ ಯೋಗಾಭ್ಯಾಸ ಸಾಧನೆ ಶಿಖರವನ್ನು ಏರುವಂತೆ ಮಾಡಿದೆ’ ಎನ್ನುತ್ತಾರೆ ತುಕಾರಾಮ.

ADVERTISEMENT

’ದೇಹದ ಆರೋಗ್ಯ ಸಮಸ್ಯೆ ಕೈ, ಕಾಲು, ಕುತ್ತಿಗೆ ನೋವುಗಳು ಕಾಣಿಸಿಕೊಳ್ಳುತ್ತಿದ್ದವು. ಇವುಗಳ ನೋವು ಸಹಿಸಲಾರದೆ ವ್ಯಾಯಾಮದಿಂದ ನೋವುಗಳಿಂದ ಮುಕ್ತಿ ಪಡೆಯಬೇಕು ಎಂದಕೊಂಡೆ. ಬಳಿಕ ಯೋಗ ಯಾವುದನ್ನು ಅನುಸರಿಸಿದರೆ ಉತ್ತಮ ಎಂಬುದರಲ್ಲಿ ಗೊಂದಲವಿತ್ತು. ಅಧ್ಯಯನ ನಡೆಸಿದೆ. ದೇಹ ಮನಸ್ಸಿನ ಆಗಾಧವಾದ ಸಕಾರಾತ್ಮಕ ಪರಿಣಾಮ ಬೀರುವ ಪರಿಪೂರ್ಣ ವ್ಯಾಯಾಮ ಸೂರ್ಯ ನಮಸ್ಕಾರ ಆಯ್ಕೆ ಮಾಡಿಕೊಂಡೆ. ಪ್ರತಿದಿನ ಸೂರ್ಯ ನಮಸ್ಕಾರ ಮಾಡಲು ಆರಂಭಿಸಿದೆ’ ಎಂದು ತಿಳಿಸಿದರು.

‘ಸೂರ್ಯ ನಮಸ್ಕಾರವು 12 ಯೋಗ ಭಂಗಿಗಳಿಂದ ಕೂಡಿದ್ದು, ನರಮಂಡಲವನ್ನು ಉತ್ತೇಜಿಸುತ್ತದೆ. ಮೊದಲು4ರಿಂದ 5 ಸೂರ್ಯ ನಮಸ್ಕಾರ ಹಾಕಲು ಕಷ್ಟ ವಾಗುತ್ತಿತ್ತು. 500 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಳ್ಳ ಬೇಕುಎಂದುನಿರ್ಧರಿಸಿದೆ.6 ತಿಂಗಳ ಅಭ್ಯಾಸದಿಂದ 50 ರಿಂದ 60 ಸೂರ್ಯ ನಮಸ್ಕಾರ ಹಾಕುವುದನ್ನು ಕರಗತ ಮಾಡಿಕೊಂಡಿದ್ದೆ’ ಎಂದರು.

ಚೆನ್ನೈನ ಪಿ.ವಿಜಯಕುಮಾರ ಎಂಬುವವರು 15 ನಿಮಿಷದಲ್ಲಿ 108 ಸೂರ್ಯ ನಮಸ್ಕಾರ ಹಾಕಿ ಲಿಮ್ಕಾ ಬುಕ್‌ ಆಫ್ ರಿಕಾರ್ಡ್‌ ಹೆಸರು ದಾಖಲಿಸಿದ್ದಾರೆ ಎಂಬುವುದು ತಿಳಿಯಿತು. ಅವರ ದಾಖಲೆಯನ್ನು ಮೀರಿಸಬೇಕು ಎಂದು ಗುರಿ ಇಟ್ಟುಕೊಂಡು ದಿನನಿತ್ಯ ಅಭ್ಯಾಸ ಆರಂಭಿಸಿದೆ. 10 ನಿಮಿಷದಲ್ಲಿ 112 ಸೂರ್ಯ ನಮಸ್ಕಾರ ಹಾಕುವುದನ್ನು ಕಲಿತೆ. ಅದು ಈಗ ನನ್ನ ಹೆಸರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ 2019ರಲ್ಲಿ ದಾಖಲಾಗಿದೆ ಎಂದು ಯೋಗಪಟು ಸಾಧನೆ ಬಿಚ್ಚಿಟ್ಟರು.

ಸಂಪರ್ಕ:95384 21277

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.