ADVERTISEMENT

ಮೋದಿ ಫೋಟೊಗೆ ಹಾರ ಹಾಕಿ ಪ್ರತಿಭಟನೆ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:53 IST
Last Updated 14 ಜೂನ್ 2021, 16:53 IST
ಅಥಣಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ಅಥಣಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು   

ಅಥಣಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜತ್ತ ರಸ್ತೆಗೆ ಹೊಂದಿಕೊಂಡಿರುವ ಸಾವಡಕರ್ ಹಾಗೂ ಬಿರಾದಾರ ಪೆಟ್ರೋಲ್ ಬಂಕ್ ಎದುರು, ದ್ವಿಚಕ್ರವಾಹನ ಮಲಗಿಸಿ ಹೂವಿನ ಹಾರ ಹಾಕಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಫೋಟೊ ಇಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಅಥಣಿ ಬ್ಲಾಕ್‌ ಅಧ್ಯಕ್ಷ ರವಿ ಬಡಕಂಬಿ ಮಾತನಾಡಿ, ‘ಲೀಟರ್ ಪೆಟ್ರೋಲ್‌ ₹ 100 ತಲುಪಿದೆ. ತೈಲ ದರ 6 ತಿಂಗಳಿಂದ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಎಲ್ಲರಿಗೂ ಸಂಕಷ್ಟ ತಂದೊಡ್ಡಿರುವ ಬಿಜೆಪಿ ಸರ್ಕಾರವನ್ನು ಜನರು ತಿರಸ್ಕರಿಸಬೇಕು’ ಎಂದರು.

ತೆಲಸಂಗ ಬ್ಲಾಕ್ ಅಧ್ಯಕ್ಷ ಸಿದ್ದು ಕೊಕಟನೂರ ಮಾತನಾಡಿದರು. ಪ್ರಕಾಶ ಕೋಳಿ, ಸಚಿನ ಬುಟಾಳಿ, ಶಂಕರ ಮಗದುಮ, ರಮೇಶ ಮಾಳಿ, ರಮೇಶ ಬಚ್ಚನ್ನವರ, ಕುಮಾರ ಬಿಳ್ಳೂರ, ಮಂಜುನಾಥ ಹೋಳಿಕಟ್ಟಿ, ತೌಸಿಫ್ ಸಾಂಗಲಿಕರ, ಅಕ್ಷಯ ಅಸ್ಕಿ, ಕೇದಾರಿ ಬಡಕಂಬಿ, ರಾಮಲಿಂಗ ಬಡಕಂಬಿ, ಭೀಮಸೇನ ಪೂಜಾರಿ, ಸಚಿನ ಬಡಕಂಬಿ, ಬಸವರಾಜ ಸೋನಕರ, ಮಾರುತಿ ಸವದತ್ತಿ, ಮಹಾಂತೇಶ ಬಾಸಿಂಗಿ, ರಹೀದ ಮಾಸ್ಟರ್, ರೋಹಿತ ತೆಲಸಂಗ, ಪುನೀತ ಬಡಕಂಬಿ, ಕೃಷ್ಣ ಸರಗರ, ಸದಾಶಿವ ಬಡಕಂಬಿ, ಬಸವರಾಜ ಸರಗರ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.