ADVERTISEMENT

ಅಂಗಡಿ ಮಾಲೀಕರಿಗೆ ದಂಡ ಸಹಿತ ಶಿಕ್ಷೆ

ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:51 IST
Last Updated 9 ಏಪ್ರಿಲ್ 2013, 19:51 IST

ಬೆಂಗಳೂರು: ವೈದ್ಯರ ಸಲಹಾ ಚೀಟಿ ಇಲ್ಲದೆ ಗ್ರಾಹಕರಿಗೆ ಮತ್ತು ಬರುವ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಮಾರತ್‌ಹಳ್ಳಿ ಬಳಿಯ ಅಶ್ವತ್ಥನಗರದ ಶ್ರೀನಿಧಿ ಮೆಡಿಕಲ್ಸ್ ಜನರಲ್ ಸ್ಟೋರ್ಸ್‌ನ ಮಾಲೀಕರಾದ ಜ್ಯೋತಿ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಸಾದಾ ಶಿಕ್ಷೆ ಹಾಗೂ ರೂ 43 ಸಾವಿರ ದಂಡ ವಿಧಿಸಿದೆ.

ಜ್ಯೋತಿ ಅವರು ಮಳಿಗೆಗೆ ಬರುತ್ತಿದ್ದ ಗ್ರಾಹಕರ ಬಳಿ ವೈದ್ಯರ ಸಲಹಾ ಚೀಟಿ ಇಲ್ಲದಿದ್ದರೂ ಅವರಿಗೆ ಮತ್ತು ಬರುವ ಔಷಧಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೇ, ಆ ಔಷಧಗಳ ಮಾರಾಟಕ್ಕೆ ಸಂಬಂಧಪಟ್ಟಂತೆ ರಸೀದಿ ಸಹ ಕೊಡುತ್ತಿರಲಿಲ್ಲ. ಈ ಕಾರಣಕ್ಕಾಗಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು ಎಂದು ಔಷಧ ನಿಯಂತ್ರಕರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜ್ಯೋತಿ ಅವರಿಗೆ ದಂಡ ಮತ್ತು ಸಾದಾ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜತೆಗೆ ಬೆಂಗಳೂರು ವೃತ್ತದ ಸಹಾಯಕ ಔಷಧ ನಿಯಂತ್ರಕರು, ಜ್ಯೋತಿ ಅವರ ಮಳಿಗೆಯ ಪರವಾನಗಿಯನ್ನು ರದ್ದುಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.