ADVERTISEMENT

ಅಂತರರಾಷ್ಟ್ರೀಯ ಕಲಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:19 IST
Last Updated 20 ಸೆಪ್ಟೆಂಬರ್ 2013, 20:19 IST
ರಾಷ್ಟ್ರೀಯ ಆಧುನಿಕ ಕಲಾಸಂಗ್ರಹಾಲಯದಲ್ಲಿ ಶುಕ್ರವಾರ ಆರಂಭವಾದ ಆರನೇ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವದಲ್ಲಿ ಶ್ರೀಲಂಕಾದ ತಿಲಕ್‌ ಫೆರ್ನಾಂಡೊ ತಂಡದವರು ನೃತ್ಯವನ್ನು ಪ್ರದರ್ಶಿಸಿದರು         –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಆಧುನಿಕ ಕಲಾಸಂಗ್ರಹಾಲಯದಲ್ಲಿ ಶುಕ್ರವಾರ ಆರಂಭವಾದ ಆರನೇ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವದಲ್ಲಿ ಶ್ರೀಲಂಕಾದ ತಿಲಕ್‌ ಫೆರ್ನಾಂಡೊ ತಂಡದವರು ನೃತ್ಯವನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆರನೇ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವಕ್ಕೆ ಶುಕ್ರವಾರ ರಾಷ್ಟ್ರೀಯ ಆಧುನಿಕ ಕಲಾಸಂಗ್ರಹಾಲಯದಲ್ಲಿ ಚಾಲನೆ ನೀಡಲಾಯಿತು.

ಕಲಾಮಹೋತ್ಸವವು ಅಕ್ಟೋಬರ್‌ 6 ರವರೆಗೆ ಒಂಬತ್ತು ದಿನಗಳು ನಗರದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಕಲಾ ಮಹೋತ್ಸವವನ್ನು ಉದ್ಘಾಟಿಸಿದರು. ಆಧುನಿಕ ಮಹಿಳೆಯ ಇಂದಿನ ಓಟ, ಅವಳ ಬಾಲ್ಯದ ಕನಸು, ಅವಳ ಯೌವನದ ತೊಳಲಾಟದ ಕುರಿತು ನೃತ್ಯ ರೂಪಕವನ್ನು ಪ್ರದರ್ಶಿಸಿದ ಪ್ರೀತಿ ಸುಂದರರಾಜನ್‌ ಅವರ ನೃತ್ಯ ಎಲ್ಲರ ಮನ ಸೆಳೆಯಿತು.

ಪಂಡಿತ್‌ ಗೋಪಾಲ್‌ ಪ್ರಸಾದ್‌ ದುಬೆ ಅವರು ಛಾವು ನೃತ್ಯ ಪ್ರದ ರ್ಶಿಸಿದರು. ಶ್ರೀಲಂಕಾದ ಕಲಾವಿದರು ಅನೇಕ ಸಾಂಸ್ಕೃತಿಕ ನೃತ್ಯಗ ಳನ್ನು ಪ್ರದರ್ಶಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.