ಬೆಂಗಳೂರು: ಖ್ಯಾತ ಕೊಳಲು ವಾದಕರಾದ ಅಂಬಳೆ ಹೇರಂಭ ಮತ್ತು ಹೇಮಂತ ಸೋದರರಿಂದ ಮಲ್ಲೇಶ್ವರದ ಗುರು ರಾಘವೇಂದ್ರ ಮಠದಲ್ಲಿ ರಾಮೋತ್ಸವದ ಪ್ರಯುಕ್ತ ಭಾನುವಾರ ಸಂಜೆ ದ್ವಂದ್ವ ವೇಣುವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪಕ್ಕವಾದ್ಯದಲ್ಲಿ ಬಿ ಎಸ್ ಪ್ರಶಾಂತ್ (ಮೃದಂಗ), ನಟರಾಜ್ (ವಯಲಿನ್), ಭಾಸ್ಕರ್ (ಘಟಂ) ಪಾಲ್ಗೊಂಡಿದ್ದರು.
ಅಂಬಳೆ ಸಹೋದರರಿಗೆ `ಯುವ ಕಲಾಶ್ರೀ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಿರುಮಲೆ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಯೋಜನಾ ಘಟಕ, ಸಪ್ತಗಿರಿ ಭಜನಾ ಮಂಡಳಿ, ಶಿವ-ಶ್ರೀಕಾಂತ ಸಂಗೀತ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಿಕ್ಕಿರಿದು ಸೇರಿದ್ದರು. ಇದೇ ಸಂದರ್ಭದಲ್ಲಿ ಹಾಸನದ ಭಾರತೀಯ ಸಂಗೀತ ನೃತ್ಯಕಲಾ ಶಾಲೆ ವತಿಯಿಂದ ಸಂಗೀತ ವಿದ್ವಾನ್ ಡಾ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ಸಂಗೀತ ನೃತ್ಯಕಲಾ ಶಾಲೆಯ ನಿರ್ದೇಶಕಿ ರಾಜೇಶ್ವರಿ ಅವರು ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.