ಬೆಂಗಳೂರು: `ಅಜ್ಞಾನಿಗಳನ್ನು ಎಚ್ಚರಿಸಿದ ಹಾಗೂ ದೀನ ದಲಿತರನ್ನು ಸಂತೈಸಿದ ಮಹಾನುಭಾವ ಅಲ್ಲಮಪ್ರಭು~ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯ ಪಟ್ಟರು.
ನಗರದ ವಚನ ಜ್ಯೋತಿ ಬಳಗವು ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಕನ್ನಡ ಸಾಹಿತ್ಯ ಲೋಕಕ್ಕೆ ಅಲ್ಲಮಪ್ರಭು ಅವರ ವಚನಗಳು ಅತ್ಯಂತ ಮೌಲಿಕ ಕೊಡುಗೆಗಳಾಗಿವೆ. ಅಲ್ಲಮಪ್ರಭು ವಚನಗಳು ಪ್ರಖರ ವೈಚಾರಿಕತೆ ಹಾಗೂ ಅನುಭಾವದ ನೆಲೆಯಲ್ಲಿ ಬೆಡಗಿನ ಉತ್ತುಂಗವನ್ನು ನಿರ್ಮಿಸುತ್ತವೆ ~ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ `ಅಲ್ಲಮ ಪ್ರಭು~ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಗದ ಡಾ.ಬಿ.ಎಸ್.ಸ್ವಾಮಿ, ಪ್ರೊ.ಟಿ.ಆರ್. ಮಹದೇವಯ್ಯ, ಎಸ್.ಪಿನಾಕಪಾಣಿ, ಗುಡಿಗೇರಿ ವಿಶ್ವನಾಥ್, ವೀಣಾ ಮೂರ್ತಿ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.