ರಾಜರಾಜೇಶ್ವರಿನಗರ: ಅಪಾರ ಸಂಖ್ಯೆಯ ಭಕ್ತರ ಜಯಘೋಷ ಹಾಗೂ ಸಡಗರ ಸಂಭ್ರಮದೊಂದಿಗೆ ರಾಜರಾಜೇಶ್ವರಿನಗರ ಸಮೀಪದ ಅರೇಹಳ್ಳಿ ಬಳಿಯ ಹನುಮಗಿರಿ ಬೆಟ್ಟದಲ್ಲಿ ಕಬ್ಬಾಳಮ್ಮದೇವಿಯ ಬ್ರಹ್ಮರಥೊತ್ಸವ ಅದ್ದೂರಿಯಾಗಿ ನಡೆಯಿತು.
ಚಿತ್ರರ್ದುಗದ ಸಿದ್ದರಾಮೇಶ್ವರ ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳು ರಥದ ಮೇಲೆ ಹೂವು, ಹಣ್ಣು ಎಸೆದು ಭಕ್ತಿ ಪ್ರದರ್ಶಿಸಿದರು.
ಪೂಜಾ ಕುಣಿತ , ವೀರಭದ್ರ ಕುಣಿತ, ಪಟದ ಕುಣಿತ, ಗೊರವನ ಕುಣಿತ, ಕಂಸಾಳೆ, ಹುಲಿ ವೇಷ, ಕೋಲಾಟ ಸೇರಿದಂತೆ ಹಲವು ಆಕರ್ಷಕ ನೃತ್ಯಗಳು ಜನಮನಸೂರೆಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.