ADVERTISEMENT

ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಹಿರಿದು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 4:55 IST
Last Updated 7 ಫೆಬ್ರುವರಿ 2012, 4:55 IST

ಬೆಂಗಳೂರು:`ಗ್ರಾಮೀಣ ಜನರಿಗೆ ಆರೋಗ್ಯ ಸೇವೆ, ಶಿಕ್ಷಣ ನೀಡುವಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಡಾ. ಡಿ ಪುರಂದೇಶ್ವರಿ ಹೇಳಿದರು.

ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮೂರು ದಿನಗಳ ಕಾಲ ನಡೆದ `ಮಹಿಳೆ ಮತ್ತು ತಂತ್ರಜ್ಞಾನ~ ವಿಷಯ ಕುರಿತ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದ ಮುಕ್ತಾಯ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

`ಗ್ರಾಮೀಣ ಮತ್ತು ನಗರ ಪ್ರದೇಶದ ಮಧ್ಯೆ ಇರುವ ಮಹಿಳೆಯರ ಅಂತರವನ್ನು ಕಡಿಮೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಭಾರತದ ಜನಸಂಖ್ಯೆಯಲ್ಲಿ ಶೇ 48ರಷ್ಟು ಇರುವ ಮಹಿಳೆಯರಿಗೆ ತಂತ್ರಜ್ಞಾನ ತಲುಪಿಸುವವರೆಗೂ ಅಭಿವೃದ್ಧಿ ಸಾಧ್ಯವಾಗದು. ಎಂದು ಅವರು ಅಭಿಪ್ರಾಯಪಟ್ಟರು.

`ಆಧ್ಯಾತ್ಮ ಎಂಬುದರು ಆಂತರ್ಯದ ತಂತ್ರಜ್ಞಾನ. ಇದನ್ನು ನಾವೆಲ್ಲ ಅರಿಯಬೇಕು~ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

`ತಂತ್ರಜ್ಞಾನವು ಜಗತ್ತನ್ನು ಒಂದು ಜಾಗತಿಕ ಹಳ್ಳಿಯಾಗಿ ಬದಲಾಯಿಸಿದೆ. ತಂತ್ರಜ್ಞಾನಕ್ಕೆ ಮಾನವೀಯ ಸ್ಪರ್ಶ ಬಹಳ ಮುಖ್ಯ. ಆದರೆ ಆಧ್ಯಾತ್ಮಕ್ಕೆ ವ್ಯಕ್ತಿಯನ್ನುಆತನ ಮೂಲಕ್ಕೆ ಕರೆದೊಯ್ಯುವ ಶಕ್ತಿ ಇದೆ~ ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆರ್ಟ್ ಆಫ್ ಲಿವಿಂಗ್‌ನ ಭಾನುಮತಿ ನರಸಿಂಹನ್ ಹೇಳಿದರು.

ಮಧ್ಯಪ್ರಾಚ್ಯ, ಇರಾಕ್, ಇರಾನ್, ಇಸ್ರೇಲ್, ಈಜಿಪ್ಟ್, ದಕ್ಷಿಣ ಆಫ್ರಿಕ, ಬಾಂಗ್ಲಾದೇಶ, ಅಮೆರಿಕ, ಇಟಲಿ, ನಾರ್ವೆ ಮತ್ತಿತರ ರಾಷ್ಟ್ರಗಳ ಮಹಿಳಾ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅರಬ್ ರಾಷ್ಟ್ರಗಳ 65 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದು ಈ ಬಾರಿಯ ಸಮ್ಮೇಳನದ ವಿಶೇಷತೆಯಾಗಿತ್ತು. 2014ರಲ್ಲಿ ಮುಂದಿನ ಸಮ್ಮೇಳನ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.