ADVERTISEMENT

ಅರೆಬೆತ್ತಲೆ ಪ್ರತಿಭಟನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:45 IST
Last Updated 26 ಮಾರ್ಚ್ 2018, 19:45 IST

ಬೆಂಗಳೂರು: ‘ಅನುಕಂಪ ಆಧಾರದ ಮೇಲೆ ಕೆಲಸ ನೀಡಲು ವಿಳಂಬ ಮಾಡುತ್ತಿರುವ ಇಂಧನ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ ಇದೇ 28ರಂದು ಆನಂದ್‌ರಾವ್‌ ವೃತ್ತದ ಬಳಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತೇನೆ’ ಎಂದು ಅಂಗವಿಕಲ ದೇವೇಂದ್ರ ಸುವರ್ಣ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೆಸ್ಕಾಂನಲ್ಲಿ ಕರ್ತವ್ಯದಲ್ಲಿದ್ದಾಗಲೇ ನನ್ನ ತಮ್ಮ ಶಶಿಧರ ಸುವರ್ಣ ಮೃತಪಟ್ಟಿದ್ದ. ಹೀಗಾಗಿ, ಅನುಕಂಪ ಆಧಾರದ ಮೇಲೆ ಕೆಲಸ ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ‘ಮೃತನ ಅವಿವಾಹಿತ ತಮ್ಮ ಅಥವಾ ತಂಗಿಗೆ ಮಾತ್ರ ಕೆಲಸ ನೀಡಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಹೇಳಿ ಕೆಲಸ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ’ ಎಂದರು.

‘ಪ್ರಧಾನಿ ಕಚೇರಿಯು ಸೂಚಿಸಿದ್ದರೂ ಕೆಲಸ ನೀಡಲು ಇಂಧನ ಇಲಾಖೆ ನಿರಾಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶಿಫಾರಸು ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.