ADVERTISEMENT

ಅಲಹಾಬಾದ್ ಬ್ಯಾಂಕ್: 2 ಹೊಸ ಶಾಖೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:20 IST
Last Updated 21 ಏಪ್ರಿಲ್ 2012, 19:20 IST

ಬೆಂಗಳೂರು: ರಾಷ್ಟ್ರೀಕೃತ ಅಲಹಾಬಾದ್ ಬ್ಯಾಂಕ್ ಬೆಂಗಳೂರಿನ ಆರ್.ಟಿ ನಗರ ಮತ್ತು ಸಹಕಾರ ನಗರದಲ್ಲಿ ಹೊಸ ಶಾಖೆ ಆರಂಭಿಸಿದೆ. ಬ್ಯಾಂಕ್ ಅಧ್ಯಕ್ಷ ಜೆ.ಪಿ.ದುವಾ ಶಾಖೆಗಳನ್ನು ಶನಿವಾರ ಉದ್ಘಾಟಿಸಿದರು.

ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆರ್.ನಾಯಕ್ ಮತ್ತಿತರರು  ಕಾರ್ಯಕ್ರಮದಲ್ಲಿದ್ದರು.

ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ ಈಗ 2,519ಕ್ಕೆ ಏರಿದೆ. ಬೆಂಗಳೂರು ವಲಯ ವ್ಯಾಪ್ತಿಯಲ್ಲಿಯೇ 49 ಶಾಖೆಗಳಿವೆ. ಹೊಸ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ (ಸಿಬಿಎಸ್) ಸೇರಿ ಸುಧಾರಿತ ಬ್ಯಾಂಕಿಂಗ್ ಸೌಲಭ್ಯಗಳೆಲ್ಲವೂ ಲಭಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.