ADVERTISEMENT

ಅವಿವಾಹಿತ ಮಹಿಳೆಯ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:40 IST
Last Updated 5 ಜನವರಿ 2012, 19:40 IST

ಬೆಂಗಳೂರು: ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಸಮೀಪದ ರೂಪೇನಅಗ್ರಹಾರದಲ್ಲಿ ಗುರುವಾರ ನಡೆದಿದೆ. ಸುಕನ್ಯಾ (45) ಆತ್ಮಹತ್ಯೆ ಮಾಡಿಕೊಂಡವರು.

ಅವಿವಾಹಿತರಾಗಿದ್ದ ಅವರು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಕನ್ಯಾ ಅವರ ಅಕ್ಕ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅಘಾತಕ್ಕೊಳಗಾಗಿದ್ದ ಅವರು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದರು. ಸಹೋದರಿ ಮಗಳು ನವ್ಯಾ ಅವರನ್ನು ಸುಕನ್ಯಾ ಅವರೇ ಸಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಸಹೋದರಿ ಸಾವಿನ ನೋವು ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ, ವೈಕುಂಠ ಏಕಾದಶಿ ದಿನ ಮೃತಪಟ್ಟರೆ ಸ್ವರ್ಗಕ್ಕೆ ಹೋಗಬಹುದು ಎಂದು ಕೆಲವರು ಸುಕನ್ಯಾ ಅವರಿಗೆ ಹೇಳಿದ್ದರೆಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಣ್ಯದಲ್ಲಿ ಗುಲ್ಬರ್ಗ ಯುವಕನ ಸಾವು
ಪೀಣ್ಯ ಮೂರನೇ ಹಂತದಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಮೃತ ಯುವಕನನ್ನು ಗುಲ್ಬರ್ಗಾದ ಇಂಡಿ ಗ್ರಾಮದ ನಿವಾಸಿ ದೈವಜ್ಞ ಕಿಶನ್(25) ಎಂದು ಗುರುತಿಸಲಾಗಿದೆ. ಮಿತಿ ಮೀರಿ ಮದ್ಯಪಾನ ಮಾಡಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಶವ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.
 
ಖಾಸಗಿ ಕಂಪೆನಿಯೊಂದರಲ್ಲಿ ಕಿಶನ್ ಸೆಕ್ಯುರಿಟಿ ಗಾರ್ಡ್ ಆಗಿದ್ದರು ಎಂದು ಗೊತ್ತಾಗಿದೆ. ಕಿಶನ್ ಅವರ ದೇಹ ಪಡೆಯಲು ಈ ವರೆಗೂ ಯಾರೂ ಬಂದಿಲ್ಲ. ಪೋಷಕರು ಅಥವಾ ಸಂಬಂಧಿಕರು ಇದ್ದಲ್ಲಿ ದೂರವಾಣಿ ಸಂಖ್ಯೆ: 2294 2532 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.