ADVERTISEMENT

‘ಅಸಮಾನತೆ ಬೋಧಿಸುವ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 20:23 IST
Last Updated 12 ನವೆಂಬರ್ 2017, 20:23 IST
ಶಿಕ್ಷಕರಾದ ದಿನೇಶ್ ಶೆಟ್ಟಿಗಾರ್, ಹನುಮಪ್ಪ ಹುದ್ದಾರ, ವಿಷ್ಣು ಶೆಟ್ಟಿ, ಲೀಲಾವತಿ ಕುಲಕರ್ಣಿ ಹಾಗೂ ಗಂಗಾ ಸುಭಾಷ್ ಅಶ್ವತ್ಥಪುರ ಅವರಿಗೆ ‘2017ನೇ ಸಾಲಿನ ಅನಿತಾಕೌಲ್‌ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಲಾಯಿತು.ಜಿ.ಎಸ್.ಜಯದೇವ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನ್ ಗೋಪಾಲ್, ತಮಿಳುನಾಡು ಸೈನ್ಸ್ ಫೋರಂನ ಎನ್.ಮಾಧವನ್, ಎಚ್.ಎನ್.ನಾಗಮೋಹನದಾಸ್, ಮನೋವೈದ್ಯ
ಶಿಕ್ಷಕರಾದ ದಿನೇಶ್ ಶೆಟ್ಟಿಗಾರ್, ಹನುಮಪ್ಪ ಹುದ್ದಾರ, ವಿಷ್ಣು ಶೆಟ್ಟಿ, ಲೀಲಾವತಿ ಕುಲಕರ್ಣಿ ಹಾಗೂ ಗಂಗಾ ಸುಭಾಷ್ ಅಶ್ವತ್ಥಪುರ ಅವರಿಗೆ ‘2017ನೇ ಸಾಲಿನ ಅನಿತಾಕೌಲ್‌ ಉತ್ತಮ ಶಿಕ್ಷಕ ಪ್ರಶಸ್ತಿ’ ನೀಡಲಾಯಿತು.ಜಿ.ಎಸ್.ಜಯದೇವ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನ್ ಗೋಪಾಲ್, ತಮಿಳುನಾಡು ಸೈನ್ಸ್ ಫೋರಂನ ಎನ್.ಮಾಧವನ್, ಎಚ್.ಎನ್.ನಾಗಮೋಹನದಾಸ್, ಮನೋವೈದ್ಯ   

ಬೆಂಗಳೂರು: ‘ನಮ್ಮ ಶಿಕ್ಷಣ ವ್ಯವಸ್ಥೆ ಅಸಮಾನತೆಯನ್ನು ಬೋಧಿಸುತ್ತದೆ’ ಎಂದು ಶಿಕ್ಷಣತಜ್ಞ ಜಿ.ಎಸ್‌.ಜಯದೇವ ಅಭಿಪ್ರಾಯಪಟ್ಟರು.

ಐಎಎಸ್‌ ಅಧಿಕಾರಿ ಅನಿತಾಕೌಲ್ ನೆನಪಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಶಾಲಾ ಶಿಕ್ಷಣ’ ರಾಜ್ಯಮಟ್ಟದ ವಿಚಾರಸಂಕಿರಣಹಾಗೂ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಶಿಕ್ಷಣವು ಬಹುರಾಷ್ಟ್ರೀಯ ಕಂಪೆನಿಗಳ ಬಳಕೆದಾರರನ್ನು ಸೃಷ್ಟಿಸಲು ಸೀಮಿತವಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕೌಶಲಗಳನ್ನು ಕಲಿಸದಿರುವುದೇ ಮಕ್ಕಳಲ್ಲಿನ ಸೃಜನಶೀಲತೆಯ ಕೊರತೆಗೆ ಪ್ರಮುಖ ಕಾರಣ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಪಾಪಪ್ರಜ್ಞೆ ಕಾಡದಂತೆ ಇತರರನ್ನು ವಂಚಿಸುವುದು ಹೇಗೆ ಎಂಬುದನ್ನು ಕಲಿಸುವ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ’ ಎಂದು ವಿಷಾದವ್ಯಕ್ತಪಡಿಸಿದರು.

ADVERTISEMENT

‘ಅನುಕರಣೆಯೇ ಅವನತಿ ಎನ್ನುವುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ಆದರೆ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಪಾಶ್ಚಾತ್ಯ ಮಾದರಿಯ ಅನುಕರಣೆ ಹೆಚ್ಚುತ್ತಿದೆ. ಶಿಕ್ಷಣದ ಮೂಲ ಆಶಯವನ್ನೇ ಸರ್ಕಾರ ಮರೆತಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ್‌, ‘ಅಸಮಾನ ಶಿಕ್ಷಣವು ಸಂವಿಧಾನಾತ್ಮಕ ಕ್ರೌರ್ಯ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸುವುದೇ ಶಿಕ್ಷಣದ ಗುರಿಯಾಗಬೇಕು. ದೇಶದಲ್ಲಿ ಆರ್ಥಿಕ ಅಂತರದ ಕಂದಕ ಎಂದಿಗಿಂತಲೂ ಇಂದು ಹೆಚ್ಚಿದ್ದು, ಶೇ 60 ರಷ್ಟು ಸಂಪತ್ತನ್ನು ಕೇವಲ ಶೇ 1 ರಷ್ಟು ಜನರು ಅನುಭವಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.