ADVERTISEMENT

ಅ. 6ರಿಂದ ಆಭರಣ ಮೇಳ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಫ್ಯಾಷನ್‌ ಷೊನಲ್ಲಿ ರಚಿತಾ ರಾಮ್‌ ಹೆಜ್ಜೆಹಾಕಿದರು
ಫ್ಯಾಷನ್‌ ಷೊನಲ್ಲಿ ರಚಿತಾ ರಾಮ್‌ ಹೆಜ್ಜೆಹಾಕಿದರು   

ಬೆಂಗಳೂರು: ಎಕ್ಸ್‌ಪೊ ವರ್ಲ್ಡ್‌ ಸಂಸ್ಥೆಯು ನಗರದಲ್ಲಿ ಅಕ್ಟೋಬರ್‌ 6 ರಿಂದ 9ರವರೆಗೆ ‘19ನೇ ಜುವೆಲ್ಸ್‌ ಆಫ್‌ ಇಂಡಿಯಾ: ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ’ ಆಯೋಜಿಸಿದೆ. ಮೇಳದ ಪೂರ್ವಭಾವಿಯಾಗಿ ಮಂಗಳವಾರ ಫ್ಯಾಷನ್‌ ಷೊ ನಡೆಯಿತು. ಮೇಳದ ರಾಯಭಾರಿ ನಟಿ ರಚಿತಾ ರಾಮ್‌  ಷೊ ಉದ್ಘಾಟಿಸಿದರು.

ಮೇಳದಲ್ಲಿ 120 ಮಳಿಗೆಗಳು ಇರಲಿವೆ. ದೇಶದ ವಿವಿಧ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಪುರುಷರು ಧರಿಸುವ ವೈವಿಧ್ಯಮಯವಾದ ಆಭರಣಗಳನ್ನು ಇಲ್ಲಿ ಕಾಣಬಹುದು ಹಾಗೂ ಕೊಳ್ಳಬಹುದಾಗಿದೆ. ಸಾಂಪ್ರದಾಯಿಕ ಮತ್ತು ನವೀನ ವಿನ್ಯಾಸದ ಆಭರಣಗಳಿರುತ್ತವೆ. ಮೇಳದಲ್ಲಿ ಜೈಪುರದ ಕುಂದನ್‌ ಮತ್ತು ಮೀನಾಕ್ಷಿ ಆಭರಣಗಳು, ರಾಜಸ್ಥಾನದ ಥೇವಾ ಮಾದರಿಯ ಸರಗಳು, ಬರ್ಮಾರೂಬಿ ಹರಳುಗಳು ಹಾಗೂ ವೈವಿಧ್ಯಯಮವಾದ ಬಳೆಗಳ ಸಂಗ್ರಹ ಪ್ರದರ್ಶನದಲ್ಲಿ ಇರಲಿದೆ.

ರಚಿತಾ ರಾಮ್‌, ‘ಈಗ ಹಬ್ಬಗಳು ಹಾಗೂ ಶುಭ ಸಮಾರಂಭಗಳ ಸಿಜನ್‌ ನಡೆಯುತ್ತಿದೆ. ಚೆಂದದ, ಸಾವಿರಾರು ಬಗೆಯ ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣಗಳು ಪ್ರದರ್ಶನದಲ್ಲಿ ಇರಲಿವೆ. ಕಡಿಮೆ ಬೆಲೆಯಿಂದ ₹ 5 ಕೋಟಿಯವರೆಗಿನ ಆಭರಣಗಳು ಮಾರಾಟಕ್ಕೆ ಇರುತ್ತವೆ’ ಎಂದು ಹೇಳಿದರು.

ADVERTISEMENT

ಸ್ಥಳ–ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ಮೈದಾನ, ಯುಬಿ ಸಿಟಿ ಸಮೀಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.