ADVERTISEMENT

ಅ.22ರಿಂದ ಗಾಯನ ಸಮಾಜದ 48ನೇ ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 20:07 IST
Last Updated 16 ಅಕ್ಟೋಬರ್ 2017, 20:07 IST

ಬೆಂಗಳೂರು: ಬೆಂಗಳೂರು ಗಾಯನ ಸಮಾಜವು ಅಕ್ಟೋಬರ್ 22ರಿಂದ 29ರವರೆಗೆ 48ನೇ ಸಂಗೀತ ಸಮ್ಮೇಳನವನ್ನು ಗಾಯನ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದೆ.

ಕಾರ್ಯಕ್ರಮವನ್ನು ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಗೀತ ವಿದ್ವಾಂಸರಾದ ವಿದ್ವಾನ್‌. ಅರ್‌.ಎನ್‌. ತ್ಯಾಗರಾಜನ್‌ ಮತ್ತು ಆರ್‌. ಎನ್‌. ತಾರಾನಾಥನ್‌ ಅವರು ವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಭಾಷಣಗಳು, ಪ್ರಾತ್ಯಕ್ಷಿಕೆಗಳು ಮತ್ತು ವಿಚಾರಗೋಷ್ಠಿಗಳು ನಡೆಯಲಿದೆ. ಇದೇ 23ರಿಂದ 28ರವರೆಗೆ ’ತ್ಯಾಗರಾಜ ವೈಭವ’ ಎಂಬ ವಿದ್ವತ್‌ ಗೋಷ್ಠಿ ನಡೆಯಲಿದೆ.

ADVERTISEMENT

ಇದೇ 29ರಂದು ನಡೆಯಲಿರುವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರು ಸಮ್ಮೇಳನದ ಅಧ್ಯಕ್ಷಕರಿಗೆ ಸಂಗೀತ ಕಲಾರತ್ನ ಬಿರುದು ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಲಾವಿದರಿಗೆ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿವಿಧ ಕಲಾವಿದರಿಂದ ಸಂಗೀತ ಕಛೇರಿ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಗಾಯನ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕ:9886044856

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.