ADVERTISEMENT

ಆಂಬುಲೆನ್ಸ್ ಡಿಕ್ಕಿ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST
ನಗರದ ಮಿನರ್ವ ವೃತ್ತ ಸಮೀಪದ ಭಾರತ್ ಜಂಕ್ಷನ್‌ ಬಳಿ ಬುಧವಾರ ರಾತ್ರಿ ಬೈಕ್‌ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್‌	 –ಪ್ರಜಾವಾಣಿ ಚಿತ್ರ
ನಗರದ ಮಿನರ್ವ ವೃತ್ತ ಸಮೀಪದ ಭಾರತ್ ಜಂಕ್ಷನ್‌ ಬಳಿ ಬುಧವಾರ ರಾತ್ರಿ ಬೈಕ್‌ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಿನರ್ವ ವೃತ್ತ ಸಮೀಪದ ಭಾರತ್‌ ಜಂಕ್ಷನ್‌ ಬಳಿ ಸೋಮವಾರ ರಾತ್ರಿ ‘108’ ಆಂಬುಲೆನ್ಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಅಮ್ಜದ್‌ ಪಾಷಾ (26) ಎಂಬುವರು ಮೃತ­ಪಟ್ಟಿದ್ದು, ಅವರ ಸ್ನೇಹಿತ ಇಮ್ರಾನ್‌ ಗಾಯಗೊಂಡಿದ್ದಾರೆ.

ಸುಧಾಮನಗರ ನಿವಾಸಿಗಳಾದ ಅಮ್ಜದ್‌ ಮತ್ತು ಇಮ್ರಾನ್‌, ಮನೆ ಸಮೀಪದ ಮಾಂಸದ ಅಂಗಡಿ ಇಟ್ಟು­ಕೊಂಡಿದ್ದರು. ಮೂರು ತಿಂಗಳ ಹಿಂದಷ್ಟೇ ಅಮ್ಜದ್‌ ಅವರಿಗೆ ವಿವಾಹ­ವಾಗಿತ್ತು. ಸಂಬಂಧಿಕರ ಮನೆಯ ಸಮಾರಂಭವೊಂದರಲ್ಲಿ ಪಾಲ್ಗೊ­ಳ್ಳಲು ಇಮ್ರಾನ್‌ನನ್ನು ಕರೆದುಕೊಂಡು ಬೈಕ್‌ನಲ್ಲಿ ಸಾರಕ್ಕಿಗೆ ಹೋಗಿದ್ದ ಅವರು, ರಾತ್ರಿ  12.30ರ  ಸುಮಾರಿಗೆ  ಸಿದ್ದಯ್ಯ ರಸ್ತೆ  ಮಾರ್ಗವಾಗಿ  ವಾಪಸಾಗುತ್ತಿ  ದ್ದಾಗ ಈ  ದುರ್ಘಟನೆ  ನಡೆದಿದೆ.

ಸಿದ್ದಯ್ಯ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ ಅಮ್ಜದ್‌ ಅದೇ ಮಾರ್ಗವಾಗಿ ಬೈಕ್‌ ಓಡಿಸಿ­ಕೊಂಡು ಬಂದಿದ್ದಾರೆ. ಇದೇ ವೇಳೆ ಆಂಬುಲೆನ್ಸ್‌, ರೋಗಿಯನ್ನು ಕರೆದು­ಕೊಂಡು ಪುರಭವನದಿಂದ ಮಿನರ್ವ ವೃತ್ತದ ಕಡೆಗೆ ಬಂದಿದೆ. ಭಾರತ್‌ ಜಂಕ್ಷನ್‌ ತಿರುವಿನಲ್ಲಿ ಎರಡೂ ವಾಹನ­ಗಳಿಗೂ ಡಿಕ್ಕಿ­ಯಾ­ಗಿದ್ದು, ಅಮ್ಜದ್ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕೊಂಡೊ­ಯ್ದರಾದರೂ ಅವರು ಬದುಕುಳಿ­ಯ­­ಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಟ್ಯಾಂಕರ್‌ ಡಿಕ್ಕಿ: ಸಾವು ಪೀಣ್ಯ ಎರಡನೇ ಹಂತದ ತಿಗಳರಪಾಳ್ಯ ಮುಖ್ಯ­ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಟ್ಯಾಂಕರ್‌ ಡಿಕ್ಕಿ ಹೊಡೆದು ಸುನೀಲ್ ಕುಮಾರ್ (28) ಎಂಬು­ವರು ಸಾವನ್ನಪ್ಪಿದ್ದಾರೆ.

ಬಿಹಾರ ಮೂಲದ ಸುನೀಲ್‌, ಕಡಬಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾ­ನೆಯೊಂದರಲ್ಲಿ ಕೆಲಸ ಮಾಡು­­ತ್ತಿದ್ದರು. ರಾಜ­ಗೋಪಾಲ­ನಗರದ ವಾಸವಾ­ಗಿದ್ದ ಅವರು ಬೆಳಿಗ್ಗೆ 7.45ರ ಸುಮಾರಿಗೆ ಬೈಕ್‌ನಲ್ಲಿ ಕೆಲ­ಸಕ್ಕೆ ಹೋಗುತ್ತಿದ್ದಾಗ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.