ಯಲಹಂಕ ವಾಯುನೆಲೆ: ಏರೊ ಇಂಡಿಯಾ ಕಾರ್ಯಕ್ರಮದ ಮೂರನೆಯ ದಿನವಾದ ಶುಕ್ರವಾರ ವಿವಿಧ ಮಾಧ್ಯಮಗಳ ಪ್ರತಿನಿಧಿಗಳೂ ಬಾನಂಗಳದಲ್ಲಿ ಸುಮಾರು ಒಂದು ತಾಸಿನ ಕಾಲ ಹಾರಾಟ ನಡೆಸಿದ ಅನುಭವ ಪಡೆದರು.
‘ಗ್ರಿಫೆನ್’ ಯುದ್ಧ ವಿಮಾನಗಳನ್ನು ತಯಾರಿಸುವ ಸ್ವೀಡನ್ ಮೂಲದ ಕಂಪೆನಿ ಸ್ಯಾಬ್ ಟೆಕ್ನಾಲಜಿಸ್ ಸಂಸ್ಥೆ ತನ್ನ ‘ಸ್ಯಾಬ್-2000’ ನಾಗರಿಕ ವಿಮಾನದಲ್ಲಿ ಸುಮಾರು 30 ಮಂದಿಯನ್ನು ಒಂದು ತಾಸಿನ ಕಾಲ ಆಕಾಶದಲ್ಲಿ ಸುತ್ತು ಹೊಡೆಸಿತು.
ಬೆಳಿಗ್ಗೆ ನಡೆದ ಯುದ್ಧ ವಿಮಾನಗಳ ಏರೋಬ್ಯಾಟಿಕ್ಸ್ ಪ್ರದರ್ಶನದ ನಂತರ ರನ್ವೇನಿಂದ ಜಿಗಿದ ಸ್ಯಾಬ್-2000 ವಿಮಾನ ಸುಮಾರು ಒಂದು ತಾಸಿನ ಕಾಲ ಬೆಂಗಳೂರು ನಗರದ ದಕ್ಷಿಣ ದಿಕ್ಕಿನಲ್ಲಿ ಹಾರಾಟ ನಡೆಸಿದ ನಂತರ ಯಲಹಂಕ ವಾಯುನೆಲೆಗೆ ಹಿಂದಿರುಗಿತು. 50 ಸೀಟುಗಳುಳ್ಳ ಈ ವಿಮಾನ ಭೂಮಟ್ಟದಿಂದ ಸುಮಾರು 31 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.