ADVERTISEMENT

ಆದಿಚುಂಚನಗಿರಿ ಮಠಕ್ಕೆ ಕೆಂಪೇಗೌಡ ಕಲ್ಯಾಣ ಮಂಟಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ಬೆಂಗಳೂರು: ಜಾಲಹಳ್ಳಿಯ ಕೆಂಪೇಗೌಡ ಕಲ್ಯಾಣ ಮಂಟಪವನ್ನು ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸಲಾಗಿದೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಆರ್‌.ಅಶೋಕ ಅವರು ಮಂಟಪದ ದಾಖಲೆ ಪತ್ರಗಳನ್ನು ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು.

‘ಈ ಮಂಟಪವನ್ನು ಕೆಡವಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸುತ್ತೇವೆ. ಇಲ್ಲಿ ಶಾಖಾ ಮಠ ಸ್ಥಾಪಿಸುವ ಜತೆಗೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ ತೆರೆಯುತ್ತೇವೆ. 400 ವಿದ್ಯಾರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇವೆ’ ಎಂದು ಸ್ವಾಮೀಜಿ ತಿಳಿಸಿದರು.

ADVERTISEMENT

ಎಚ್‌.ಎಂ.ಟಿ. ಕೆಂಪೇಗೌಡ ಸಮಿತಿಯ ಅಧ್ಯಕ್ಷ ಆರ್‌.ಅಶ್ವಥ್‌, ‘1973ರಲ್ಲಿ ಸಮಿತಿ ಆರಂಭಿಸಲಾಗಿತ್ತು. 1991ರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು, ಇದಕ್ಕಾಗಿ ಸಮಿತಿಯ ಸದಸ್ಯರು ಒಂದು ತಿಂಗಳ ಸಂಬಳ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಈ ಮಂಟಪಕ್ಕೆ ಬೇಡಿಕೆ ಕಡಿಮೆ ಆಗಿತ್ತು. ಕಟ್ಟಡ ಖಾಲಿ ಇರುವುದಕ್ಕಿಂತ ಜನರ ಉಪಯೋಗಕ್ಕೆ ಸಿಗಲಿ ಎಂಬ ಉದ್ದೇಶದಿಂದ ಮಠಕ್ಕೆ ದಾನ ಮಾಡಿದ್ದೇವೆ’ ಎಂದರು.

ಅತಿ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಪದವಿಯ 110 ವಿದ್ಯಾರ್ಥಿಗಳಿಗೆ ಒಟ್ಟು ₹8.55 ಲಕ್ಷ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.