
ಪ್ರಜಾವಾಣಿ ವಾರ್ತೆದೊಡ್ಡಬಳ್ಳಾಪುರ: ನಗರದ ಲಯನ್ಸ್್ ಕ್ಲಬ್ ವತಿಯಿಂದ ಉಚಿತ ಆಯುರ್ವೇದ ಮತ್ತು ಹೋಮಿಯೋಪಥಿಕ್ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಗರದ ಲಯನ್ಸ್ ಭವನದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಲಯನ್ಸ್ ಮಾಜಿ ಜಿಲ್ಲಾ ರಾಜ್ಯಪಾಲ ಎಂ.ಅಶ್ವತ್ಥಯ್ಯ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ.ಶಿವಣ್ಣ, ಅಧ್ಯಕ್ಷತೆ ವಹಿಸಿದ್ದರು.
ಕೆ.ಎನ್.ಸುಬ್ಬರಾವ್ ಮತ್ತು ಕುಟುಂಬ ಶಿಬಿರವನ್ನು ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮುರಳೀಕೃಷ್ಣ, ಲಯನ್ಸ್ ಚಾರಿಟಬಲ್ ಟ್ರಸ್ಟ್ ಕೃಷ್ಣಮೂರ್ತಿ, ಪುಟ್ಟುರುದ್ರಪ್ಪ, ಲಯನ್ ನಾಗಪ್ರಿಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಕೆ.ಸೋಮಶೇಖರ್ ಖಜಾಂಚಿ ಬೂದಿಪಲ್ಲಿ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.