ADVERTISEMENT

ಆರೋಪಿಗಳಿಗೆ 13ರವರೆಗೆ ನ್ಯಾಯಾಂಗ ಬಂಧನ

ಸಚಿವ ಶಿವಕುಮಾರ್‌ಗೆ ಲಂಚದ ಆಮಿಷ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ಇಂಧನ ಸಚಿವ ಡಿ.ಕೆ.­ಶಿವ­ಕುಮಾರ್‌ ಅವರಿಗೆ ಲಂಚದ ಆಮಿಷ­ವೊಡ್ಡಿದ್ದ ಆರೋಪದ ಮೇಲೆ ಸದಾಶಿವ­ನಗರ ಪೊಲೀಸರು ಬಂಧಿಸಿ­ರುವ ನ್ಯೂಸ್‌9 ಆಂಗ್ಲ­ವಾಹಿನಿಯ ವರದಿಗಾರ­ರಾದ ಶ್ರೇಯಸ್‌ ಮತ್ತು ಶ್ವೇತಾ ಅವ­ರನ್ನು ಮಾ.13­ರವರೆಗೆ ನ್ಯಾಯಾಂಗ ಬಂಧ­ನಕ್ಕೆ ಒಪ್ಪಿಸಿ ಲೋಕಾಯುಕ್ತ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.

ಪ್ರತಿದೂರು: ‘ಸಚಿವ ಡಿ.ಕೆ. ಶಿವ­ಕುಮಾರ್‌ ಹಾಗೂ ಬೆಂಬಲಿಗರು ತಮ್ಮೊಂದಿಗೆ ಅನುಚಿತ­ವಾಗಿ ವರ್ತಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶ್ರೇಯಸ್‌ ಮತ್ತು ಶ್ವೇತಾ ಅವರು ಮಂಗಳ­ವಾರ ಪ್ರತಿದೂರು ಕೊಟ್ಟಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ಪ್ರಮುಖ ಆರೋಪಿ ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಅವರು ತಲೆ­ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.