ADVERTISEMENT

ಇಂದಿನಿಂದ ‘ಕ್ರೆಡಾಯ್‌’ ಮೇಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:26 IST
Last Updated 9 ಮಾರ್ಚ್ 2018, 19:26 IST

ಬೆಂಗಳೂರು: ಭಾರ­ತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕದ ಆಶ್ರಯದಲ್ಲಿ ವಸತಿ ಯೋಜನೆಗಳ ಎರಡು ದಿನಗಳ ಪ್ರದರ್ಶನವು ನಾಳೆಯಿಂದ (ಮಾರ್ಚ್ 10 ರಿಂದ) ಎರಡು ದಿನಗಳ ಕಾಲ ನಡೆಯಲಿದೆ.

ರಿಯಲ್ ಎಸ್ಟೇಟ್‌ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ (ರೇರಾ) ಮತ್ತು ಜಿಎಸ್‌ಟಿ ಜಾರಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಪ್ರದರ್ಶನ ಇದಾಗಿದೆ.

ಈ ತಿಂಗಳಲ್ಲಿ ನಗರದ ಮೂರು ಕಡೆಗಳಲ್ಲಿ ಇಂತಹ ಪ್ರದರ್ಶನ ನಡೆಯಲಿವೆ. ಮೊದಲ ಪ್ರದರ್ಶನವು ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಕಲ್ಯಾಣಿ ಕಲಾ ಮಂದಿರದಲ್ಲಿ ನಡೆಯಲಿದೆ. 22 ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಐದು ಹಣಕಾಸು ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

ADVERTISEMENT

ಇದೇ 16 ರಿಂದ 18ರವರೆಗೆ ಮಾನ್ಯತಾ ಟೆಕ್‌ ಪಾರ್ಕ್‌ನ  ವ್ಹೈಟ್‌ ಆರ್ಕಿಡ್‌ನಲ್ಲಿ ಮತ್ತು 17 ರಿಂದ 18ರವರೆಗೆ ಮಾರತ್‌ಹಳ್ಳಿಯ ಪಾರ್ಕ್‌ ಪ್ಲಾಜಾದಲ್ಲಿ ಪ್ರದರ್ಶನ ನಡೆಯಲಿದೆ ಎಂದು ಕ್ರೆಡಾಯ್ ಬೆಂಗಳೂರು ಘಟಕದ ಅಧ್ಯಕ್ಷ ಆಶೀಶ್‌ ಆರ್‌. ಪುರವಂಕರ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.