ADVERTISEMENT

ಇಂದು, ನಾಳೆ ಹೋಂಡಾ ಕಾರು ವಿನಿಮಯ ಮೇಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:47 IST
Last Updated 23 ಫೆಬ್ರುವರಿ 2018, 19:47 IST

ಬೆಂಗಳೂರು: ಹಲಸೂರಿನ ಆರ್‌ಬಿಎಎನ್ಎಂಎಸ್‌ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ಹೋಂಡಾ ಕಾರುಗಳ ವಿನಿಮಯ ಮೇಳ ಏರ್ಪಡಿಸಲಾಗಿದೆ.

ಕಂಪನಿಯ ಎಲ್ಲಾ ಬಗೆಯ ಕಾರುಗಳೂ ಇಲ್ಲಿ ಪ್ರದರ್ಶನಗೊಳ್ಳಲಿವೆ. ಇವುಗಳನ್ನು ಪರೀಕ್ಷಾರ್ಥ ಚಲಾಯಿಸುವವರಿಗೆ ಹಾಗೂ ಮೌಲ್ಯಮಾಪನ ನಡೆಸುವವರಿಗೆ ಉಡುಗೊರೆ ನೀಡಲಾಗುವುದು. ವಿನಿಮಯ ಮಾಡಿಕೊಳ್ಳಲು ಬಯಸುವ ಹಳೆಯ ಕಾರುಗಳಿಗೆ ಹರಾಜಿನ ಮೂಲಕ ಉತ್ತಮ ದರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

2017ರ ಆಯ್ದ ಕಾರುಗಳಿಗೆ ₹ 2 ಲಕ್ಷದವರೆಗೂ ರಿಯಾಯಿತಿ ಪಡೆಯುವ ಅವಕಾಶ ಇದೆ. ಹೊಸ ಕಾರುಗಳ ಮೇಲೆ ₹ 10 ಸಾವಿರ ವಿನಿಮಯ ಬೋನಸ್‌ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.