ADVERTISEMENT

ಇಸ್ಕಾನ್ ಗೋಡೆ ಕುಸಿದು ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 11:01 IST
Last Updated 10 ಸೆಪ್ಟೆಂಬರ್ 2013, 11:01 IST

ಬೆಂಗಳೂರು : ನಗದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಇಸ್ಕಾನ್ ದೇವಾಲಯದ ಗೋಡೆ ಕುಸಿದು ಪಕ್ಕದಲ್ಲಿದ್ದ  ಕೊಳೆಗೇರಿಯ ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಘಟನೆಯಲ್ಲಿ ಏಳು ವರ್ಷದ ಮಗು ಸೇರಿದಂತೆ ಮೂರು ಮಂದಿ  ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಐದು ಗುಡಿಸಲುಗಳಿಗೆ ಹಾನಿಯಾಗಿದೆ.

ಮೃತರ ದೇಹವನ್ನು ಹೊರತೆಗೆಯಲಾಗಿದ್ದು, ಜಯ (7) ಚನ್ನಗಿರಿಯಪ್ಪ (50) ಎಂದು ಗುರುತಿಸಲಾಗಿದೆ. ಅಲ್ಲದೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ಎಸಿಪಿ ಕಮಲ್ ಪಂತ್ ತಿಳಿಸಿದ್ದಾರೆ.

ಗೃಹ ಸಚಿವ ಜಾರ್ಜ್, ಸ್ಥಳಿಯ ಶಾಸಕ ಕೃಷ್ಣಪ್ಪ ಮತ್ತು ಮೇಯರ್ ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಗಳನ್ನು ವೀಕ್ಷಿಸಿದರು.

ಮೃತರ ಮತ್ತು ಗಾಯಾಳುಗಳಿಗೆ ಇಸ್ಕಾನ್ ದೇವಾಲಯದ ವ್ಯವಸ್ಥಾಪಕ ಮಂಡಳಿಯ ವಕ್ತಾರ ಭರತ ಆರ್ ಶಾಭ ದಾಸ್ 5 ಲಕ್ಷ ಪರಿಹಾರ ಘೋಷಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT