ಬೆಂಗಳೂರು: ಸ್ನೇಹಿತರೊಂದಿಗೆ ಈಜಲು ಕೆರೆಗೆ ಹೋದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಸವನಪುರದಲ್ಲಿ ಶನಿವಾರ ಸಂಭವಿಸಿದೆ.
ಸೆಕ್ಯುರಿಟಿ ಕಂಪೆನಿಯೊಂದರ ಮೇಲ್ವಿಚಾರಕರಾದ ಇಂದ್ರಕುಮಾರ್ ಎಂಬುವರ ಮಗ ಮಹೇಶ್ (14) ಮೃತಪಟ್ಟಿದ್ದಾನೆ. ಚಿಕ್ಕಮ್ಮನಹಳ್ಳಿಯ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮಹೇಶ್, ಬೆಳಗಿನ ತರಗತಿ ಮುಗಿಸಿಕೊಂಡು ಸ್ನೇಹಿತರೊಂದಿಗೆ ಬಸವನಪುರದಲ್ಲಿರುವ ಕೆರೆಗೆ ಈಜಲು ಹೋಗಿದ್ದನು.
ಅವನು ನೀರಿನಲ್ಲಿ ಮುಳುಗುತ್ತಿದ್ದಂತೆ ಗಾಬರಿಗೊಂಡ ಅವನ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸಂಜೆ ವೇಳೆಗೆ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಯಿತು. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.