ADVERTISEMENT

`ಉತ್ಪಾದಕ ವಲಯಕ್ಕೆ ಜಾಗತಿಕ ಅಪಾರ ಅವಕಾಶ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 19:22 IST
Last Updated 6 ಡಿಸೆಂಬರ್ 2012, 19:22 IST

ಬೆಂಗಳೂರು:  `ದೇಶದ ಕೈಗಾರಿಕಾ ಅಭಿವೃದ್ಧಿ ಉತ್ಪಾದಕ ವಲಯವನ್ನು ಅವಲಂಬಿಸಿದೆ. ಅಲ್ಲದೆ ದೇಶದ ಉತ್ಪಾದಕ ವಲಯಕ್ಕೆ ಈಗ ಜಾಗತಿಕ ಅವಕಾಶ ಅಪಾರವಾಗಿದೆ' ಎಂದು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಪಂಕಜ್ ಚಂದ್ರ ಅಭಿಪ್ರಾಯಪಟ್ಟರು.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಗುರುವಾರ ಆಯೋಜಿಸಿದ್ದ `ಆರ್ಥಿಕ ಅಭಿವೃದ್ಧಿ ಮತ್ತು ಬಡತನ' ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಸಿಯಾಚಿನ್ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್ ಉಪಾಧ್ಯಕ್ಷ ಗ್ಯೂ ಕ್ಸಿಯಾಮಿಂಗ್ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್, ನಗರದ ಇನ್ಸ್‌ಟಿಟ್ಯೂಟ್ ಫಾರ್ ಸೋಷಿಯಲ್ ಚೇಂಜ್, ಸಿಯಾಚಿನ್ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್ ಆಶ್ರಯದಲ್ಲಿ 2 ದಿನಗಳ ಸಮಾವೇಶ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.