ADVERTISEMENT

ಎ.ಎಸ್.ಜಿ ಆಗಿ ಸಿ.ಶಶಿಕಾಂತ್ ನೇಮಕ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಎ.ಎಸ್.ಜಿ ಆಗಿ ಸಿ.ಶಶಿಕಾಂತ್ ನೇಮಕ
ಎ.ಎಸ್.ಜಿ ಆಗಿ ಸಿ.ಶಶಿಕಾಂತ್ ನೇಮಕ   

ಬೆಂಗಳೂರು: ಹೈಕೋರ್ಟ್ ವಕೀಲ ಸಿ.ಶಶಿಕಾಂತ್ ಅವರನ್ನು ಸಹಾಯಕ ಸಾಲಿಸಿಟರ್ ಜನರಲ್ (ಎ.ಎಸ್.ಜಿ) ಆಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಕೃಷ್ಣ ಎಸ್. ದೀಕ್ಷಿತ್ ಈ ಸ್ಥಾನದಲ್ಲಿದ್ದರು. ದೀಕ್ಷಿತ್ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ಬಳಿಕ ಈ ಸ್ಥಾನ ಖಾಲಿ ಇತ್ತು.

ಶಶಿಕಾಂತ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚಿಪ್ಪಳಿ ಗ್ರಾಮದವರು. 35 ವರ್ಷಗಳಿಂದ ವಕೀಲಿಕೆ ನಡೆಸುತ್ತಿದ್ದಾರೆ.

ADVERTISEMENT

1975 ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಒಂದೂವರೆ ತಿಂಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು. ಶಶಿಕಾಂತ್ ಆಗಿನ್ನೂ ಪಿ.ಯು ವಿದ್ಯಾರ್ಥಿಯಾಗಿದ್ದರು. ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಇವರನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಶಶಿಕಾಂತ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾಲೇಜಿಗೆ ಪ್ರವೇಶ ಪಡೆದಿದ್ದರು.  ಆಗ ಇವರ ಪರವಾಗಿ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಎನ್.ಸಂತೋಷ್ ಹೆಗ್ಡೆ ಹಾಗೂ ರಾಮಾ ಜೋಯಿಸ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.