ಬೆಂಗಳೂರು: 'ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ’ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಮ್ನೆಸ್ಟಿ ಸಂಸ್ಥೆಯನ್ನು ನಿಷೇಧಿಸಿ ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿದೆ.
ಶುಕ್ರವಾರ ಪ್ರತಿಭಟನಾನಿರತ ಎಬಿವಿಪಿ ಕಾರ್ಯಕರ್ತರು ಇಂದಿರಾನಗರದ 13ನೇ ಕ್ರಾಸ್‌ನಲ್ಲಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಕಾರ್ಯಕರ್ತರು ಸಂಸ್ಥೆಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಲಾಠಿ ಚಾರ್ಜ್‍ನಲ್ಲಿ ಐವರು ಕಾರ್ಯಕರ್ತರಿಗೆ ತೀವ್ರ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 40 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಾವು ಸಂಸ್ಥೆಯೊಳಗೆ ನುಗ್ಗಲು ಯತ್ನಿಸಿಲ್ಲ
ನಾನು ಆಮ್ನೆಸ್ಟಿ ಸಂಸ್ಥೆಯೊಳಗೆ ನುಗ್ಗಲು ಯತ್ನಿಸಿಲ್ಲ. ಪ್ರತಿಭಟನೆ ಮುಕ್ತಾಯ ಹಂತದಲ್ಲಿದ್ದಾಗ ಪೊಲೀಸರು ಬಲವಂತವಾಗಿ ನಮ್ಮ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಮ್ನೆಸ್ಟಿ ಸಂಸ್ಥೆಯೊಳಗೆ ಯಾರೂ ಇಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ ಕಚೇರಿಯ ಒಳಗೆ ಇದ್ದವರು ನಮ್ಮ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದಾಗ ಅದನ್ನು ತಡೆಯುವಂತೆ ನಾವು ಹೇಳಿದೆವು. ಪೊಲೀಸರು ಅದಕ್ಕೆ ಒಪ್ಪಲಿಲ್ಲ. ಬದಲಾಗಿ ನಮ್ಮ ಮೇಲೆಯೇ ಲಾಠಿ ಪ್ರಹಾರ ಮಾಡಿದರು ಎಂದು ಎಬಿವಿಪಿ ಮುಖಂಡ ವಿನಯ್ ಬಿದರೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.